ನೋಟರಿಯಾಗಿ ನೇಮಕ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪೂರ ಗ್ರಾಮದ ನಿವಾಸಿ, ವಕೀಲರಾದ ಸುರೇಶ್ ಬಿಸನಳ್ಳಿ ಅವರು ನೋಟರಿಯಾಗಿ ನೇಮಕಗೊಂಡಿದ್ದಾರೆ. ಸುರೇಶ್ ಬಿಸನಳ್ಳಿ ಅವರು ಕಳೆದ ಹನ್ನೆರಡು ವರ್ಷಗಳಿಂದ ಗದಗನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಕರ್ನಾಟಕ ರಾಜ್ಯ ಸರ್ಕಾರವು ಅವರನ್ನು ನೋಟರಿಯಾಗಿ ನೇಮಕ ಮಾಡಿದೆ.

Advertisement

ಅಭಿನಂದನೆ: ನೂತನವಾಗಿ ನೋಟರಿಯಾಗಿ ನೇಮಕಗೊಂಡ ಸುರೇಶ್ ಬಿಸನಳ್ಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ರೋಣ ಶಾಸಕರಾದ ಜಿ.ಎಸ್. ಪಾಟೀಲ, ಗದಗ ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ವಿ.ಆರ್. ಗುಡಿಸಾಗರ್, ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ, ನ್ಯಾಯವಾದಿ ಹಾಗೂ ಕರ್ನಾಟಕ ವಕೀಲರ ಪರಿಷತ್‌ನ ವಕೀಲರ ಕಲ್ಯಾಣ ನಿಧಿ ಸದಸ್ಯ ಎಸ್.ಕೆ. ನದಾಫ್ ಸೇರಿ ಎಲ್ಲ ಹಿರಿಯ-ಕಿರಿಯ ನ್ಯಾಯವಾದಿಗಳು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here