ಬೆಂಗಳೂರು:- ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಮತ್ತು ವೇಣುಗೋಪಾಲ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ರಾಜ್ಯದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರು ಎಲ್ಲರನ್ನು ಕರೆದು ಮಾತುಕತೆ ಮಾಡಿ ನನ್ನಿಂದ ಏನು ಆಗಲ್ಲ ಅಂತ ದೆಹಲಿ ಹೋಗಿದ್ದರು. ನನ್ಮ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅಂತ ಹೇಳಿ ಹೋದ್ರು. ಯಾಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಮಾತಾಡಿದ್ರು ಅಂತ ರಾಜ್ಯದ ಜನರಿಗೆ ಗೊಂದಲ ಆಗಿತ್ತು. ಈಗ ಆ ಗೊಂದಲ ಏನು ಅಂತ ಕ್ಲಿಯರ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ವೇಣುಗೋಪಾಲ್ ಅಂತ ಗೊತ್ತಾಯ್ತು. ಎಐಸಿಸಿ ಅಧ್ಯಕ್ಷರಿಗಿಂತ ವೇಣುಗೋಪಾಲ್ ದೊಡ್ಡವರು ಅಂತ ಗೊತ್ತಾಯ್ತು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೂ ವೇಣುಗೋಪಾಲ್ ಹೈಕಮಾಂಡ್ ಆಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಗೊತ್ತಾಯ್ತು. ಯಾವುದೋ ಒಬ್ಬ ವ್ಯಕ್ತಿ ಕೈಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ಹರಿಹಾಯ್ದರು.



