ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಹಿತರಕ್ಷಣಾ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿಧಾತ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ನಗರಸಭೆ ಆವರಣದಲ್ಲಿನ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಪ್ರವೀಣ ಹಾದಿಮನಿ, ಉಪಾಧ್ಯಕ್ಷ ಜೂನಸಾಬ್ ಉಮಚಗಿ, ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ ಹಾದಿಮನಿ, ಸಂಘಟನಾ ನಿರ್ದೇಶಕ ಮಣಿಕಂಠ ಹಾದಿಮನಿ, ಸದಸ್ಯರಾದ ರವಿ ಹಾದಿಮನಿ, ಮಂಜುನಾಥ ಹಾದಿಮನಿ, ಕಿರಣ ಹಾದಿಮನಿ, ಮೊಹಮ್ಮದ್ ರಫೀಕ್ ಧಾರವಾಡ, ನಾಗರಾಜ್ ಕಾಳೆ, ಮೊಹಮ್ಮದ್ ದಾವೂದ್ ಕುಮನೂರ, ಸಿದ್ದಪ್ಪ ಹಾದಿಮನಿ, ನಿಂಗರಾಜ್ ಹಾದಿಮನಿ ಇತರರು ಉಪಸ್ಥಿತರಿದ್ದರು.



