ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದ ನಂತರ ಟೀಂ ಇಂಡಿಯಾ ಈಗ ಕಟಕ್‌ನಲ್ಲಿ ಮಂಗಳವಾರ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ.
ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಉತ್ತಮ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದೆ. ಇತ್ತ ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಲು ದಕ್ಷಿಣ ಆಫ್ರಿಕಾ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ನಿರೀಕ್ಷೆಯಿದೆ. ಆದಾಗ್ಯೂ, ಪಂದ್ಯಕ್ಕೆ ಮುನ್ನ ಕಟಕ್‌ನ ಹವಾಮಾನ ಎಲ್ಲರ ಗಮನ ಸೆಳೆದಿದೆ.
ಮಳೆಯ ಸಾಧ್ಯತೆ ಇಲ್ಲದಿದ್ದರೂ, ರಾತ್ರಿ ವೇಳೆಗೆ ತಾಪಮಾನ ಸುಮಾರು 12 ಡಿಗ್ರಿಗೆ ಇಳಿಯುವ ಲಕ್ಷಣಗಳಿವೆ. ಇಬ್ಬನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬೌಲರ್‌ಗಳಿಗೆ ಸವಾಲು ಎದುರಾಗಬಹುದು, ಇದರಿಂದ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಗುವ ಚಿತ್ರಣವಿದೆ. ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಸಹಾಯಕವಾದ ಪಿಚ್, ಇಬ್ಬನಿಯ ಕಾರಣದಿಂದ ತಮ್ಮ ಪ್ರಭಾವ ಕಡಿಮೆ ಮಾಡಲುಬಹುದು. ಚೆನ್ನಾದ ಬೌನ್ಸ್ ಇರುವ ಪಿಚ್ ಬ್ಯಾಟ್‌ಗೆ ಚೆಂಡು ಸರಾಗವಾಗಿ ಬರುವ ಕಾರಣ ರನ್‌ಗಳ ಮಳೆ ಸಾಧ್ಯತೆ ಜಾಸ್ತಿಯಿದೆ. ಇಬ್ಬನಿಯ ಪರಿಣಾಮ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವಾಗುವ ಕಾರಣ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಉತ್ಸುಕವಾಗಲಿದೆ.



