HomeGadag Newsರಾಜ್ಯಮಟ್ಟದ ಎರಡು ದಿನಗಳ ಟಗರಿನ ಕಾಳಗ ಮುಕ್ತಾಯ

ರಾಜ್ಯಮಟ್ಟದ ಎರಡು ದಿನಗಳ ಟಗರಿನ ಕಾಳಗ ಮುಕ್ತಾಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ದ್ವಿತೀಯ ಬಾರಿಗೆ ನಡೆದ ರಾಜ್ಯಮಟ್ಟದ ಎರಡು ದಿನಗಳ ಟಗರಿನ ಕಾಳಗ ರವಿವಾರ ಮುಕ್ತಾಯಗೊಂಡಿತು.

ಶನಿವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ರೈತ ಮುಖಂಡ ಮಂಜುನಾಥ ಮಾಗಡಿ ಮಾತನಾಡಿ, ನಮ್ಮ ಗ್ರಾಮೀಣ ಭಾಗದಲ್ಲಿ ನಡೆಯುವ ಅನೇಕ ಕ್ರೀಡೆಗಳು ಹೆಚ್ಚು ಮಹತ್ವದ್ದಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್, ಮೊಬೈಲ್ ಗೀಳಿನಿಂದ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಕ್ರೀಡೆಗಳ ಆಸಕ್ತಿ ಕುಂಠಿತವಾಗುತ್ತಿರುವದು ವಿಷಾದದ ಸಂಗತಿಯಾಗಿದೆ. ಟಗರಿನ ಕಾಳಗ, ಹೋರಿ ಓಡಿಸುವದು, ಚಕ್ಕಡಿ ಸ್ಪರ್ಧೆ, ಕಬಡ್ಡಿ, ಅಟ್ಯಾಪಟ್ಯಾದಂತಹ ಅನೇಕ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವದು ಅವಶ್ಯವಾಗಿದೆ. ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ರಾಜ್ಯಮಟ್ಟದ ಟಗರಿನ ಸ್ಪರ್ಧೆಯನ್ನು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಿಭಾಯಿಸುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿಂಗಪ್ಪ ಬನ್ನಿ, ಶಬ್ಬಿರಲಿ ಶೇಖ್, ಬಸವರಾಜ ಹಿರೇಮನಿ, ಭರಮಣ್ಣ ಶರಸೂರಿ, ಸುರೇಶ ಹಟ್ಟಿ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಮಂಜುನಾಥ ಮುಳಗುಂದ, ಮಾಂತೇಶ ಶರಸೂರಿ, ಸಂತೋಷ ಬಾಲೇಹೊಸೂರು, ನಿಂಗಪ್ಪ ಕೊರಟ್ಟಿ, ಲೆಂಕಪ್ಪ ಶರಸೂರಿ, ಸಿದ್ದು ಹವಳಣ್ಣವರ, ನೀಲಪ್ಪ ಗದ್ದಿ, ಮಂಜುನಾಥ ಗದ್ದಿ, ಹನುಮಂತ ಹುರುಕನವರ, ಗಿರೀಶ ಗೂಳಿ, ಹಾಗೂ ಬಳಗದ ಸದಸ್ಯರು ಹಾಜರಿದ್ದರು. ಮಂಜುನಾಥ ಶರಸೂರಿ ನಿರೂಪಿಸಿದರು.

ಹಾಲು ಹಲ್ಲಿನ ಮರಿ, ಎರಡು ಹಲ್ಲಿನ ಮರಿ, ನಾಲ್ಕು ಹಲ್ಲಿನ ಮರಿ, ಎಂಟು ಹಲ್ಲಿನ ಮರಿ ಹೀಗೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ಟಗರುಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅನೇಕ ತಾಲೂಕುಗಳಿಂದ ಟಗರುಗಳನ್ನು ಸ್ಪರ್ಧೆಗಾಗಿ ಕರೆತರಲಾಗಿತ್ತು. ಟಗರುಗಳ ಸೆಣಸಾಟ ರೋಚಕವಾಗಿತ್ತು. ಅಲ್ಲದೆ ಟಗರುಗಳಿಗೆ ಚಿತ್ರನಟರ, ಚಿತ್ರಗಳ, ಊರುಗಳ ಹೆಸರುಗಳನ್ನು ಇಡಲಾಗಿದ್ದು, ವಿವಿಧ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಜನರು ಟಗರು ಕಾಳಗವನ್ನು ವೀಕ್ಷಿಸಿದರು. ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಸರ್ವಸದಸ್ಯರು ಕ್ರೀಡೆಯನ್ನು ಅಚ್ಚುಕಟ್ಟಾಗಿ ಸಂಘಟಿಸಿ ಮೆಚ್ಚುಗೆ ಗಳಿಸಿದರು.

ಫಲಿತಾಂಶ
ಹಾಲು ಹಲ್ಲಿನ ಮರಿ- ಧಾರವಾಡದ ಬುಲೆಟ್ ಬಸ್ಯಾ(ಪ್ರಥಮ), ಲಕ್ಷ್ಮೇಶ್ವರದ ಬ್ಲಾಕ್ ಟೈಗರ್ ಸುಲೇಮಾನ್(ದ್ವಿತೀಯ), ಹರ್ತಿಯ ಸಲಗ ಗ್ರೂಪ್ (ತೃತೀಯ), ಎರಡು ಹಲ್ಲಿನ ಮರಿ-ಲಕ್ಷ್ಮೇಶ್ವರದ ಭವಾನಿ(ಪ್ರಥಮ), ಭಾವನೂರ ರಾವಣ (ದ್ವಿತೀಯ), ಅದರಗುಂಚಿಯ ದಂಡಿ ದುರ್ಗಮ್ಮ ದೇವಿ(ತೃತೀಯ), ನಾಲ್ಕು ಹಲ್ಲಿನ ಮರಿ-ಹಿರೇವಡ್ಡಟ್ಟಿ ವಾಲ್ಮೀಕಿ ಸರ್ಕಾರ(ಪ್ರಥಮ) ಲಕ್ಷ್ಮೇಶ್ವರದ ಮನೆ ಮಗ ಬಲ್ಲಾ(ದ್ವಿತೀಯ), ಕಲ್ಲೂರಿನ ಭಂಡಾರದ ಒಡೆಯ(ತೃತೀಯ), ಎಂಟು ಹಲ್ಲಿನ ಮರಿ- ಹಾತಲಗೇರಿಯ ಹುಚ್ಚ(ಪ್ರಥಮ), ಜ್ಯೋತಿಬಾ ಬಾಯ್ ಅಲಿಯಾಸ್ ಗುಣ(ದ್ವಿತೀಯ), ಹೆಬ್ಬಾಳದ ಇಂದಿರಾನಗರ ಗಿಡ್ಡ (ತೃತೀಯ) ಬಹುಮಾನ ಪಡೆದುಕೊಂಡವು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!