ವಿಜಯಸಾಕ್ಷಿ ಸುದ್ದಿ, ರೋಣ: ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಬಿ.ಎಡ್ ಮಹಾವಿದ್ಯಾಲಯದ ಪ್ರಚಾರ್ಯ ಪ್ರೊ. ಯಚ್ಚರಪ್ಪ ಪಾಪಣ್ಣವರ ಮಂಡಿಸಿದ ಪ್ರಬಂಧಕ್ಕೆ ಆಂಧ್ರಪ್ರದೇಶದ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರದಾನ ಮಾಡಿ ಗೌರವಿಸಿದೆ.
ಪಿಎಚ್‌ಡಿ ಪಡೆದಿರುವ ಪ್ರೊ. ಯಚ್ಚರಪ್ಪ ಪಾಪಣ್ಣವರ ಅವರಿಗೆ ಸಂಸ್ಥೆಯ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಡಾ. ಕೆ.ಬಿ. ಧನ್ನೂರ ಸೇರಿದಂತೆ ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.



