ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಲಕ್ಷ್ಮೇಶ್ವರ ಪಟ್ಟಣದ ಸಮಗ್ರ ರೈತ ಹೋರಾಟದ ವೇದಿಕೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರರಿಗೆ ಅವಮಾನ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಶಿರಹಟ್ಟಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮುತ್ತುರಾಜ ಭಾವಿಮನಿ, ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾದಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಪ್ರಾರಂಭಿಸುವುದಕ್ಕಾಗಿ ಹಮ್ಮಿಕೊಂಡಿರುವ ಹೋರಾಟದ ವೇದಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರದ ಮುಖದ ಕಡೆ ಕಾಲು ಮಾಡಿ ತೋರಿಸಿ ಕುಳಿತುಕೊಂಡು ಅವಮಾನ ಮಾಡಿದ ಜ್ಞಾನದೇವ ಬೋಮಲೆ ಎಂಬ ವ್ಯಕ್ತಿಯ ಮೇಲೆ ಕಾನೂನಾತ್ಮಕವಾಗಿ ಕ್ರಮ ಕೈಕೊಳ್ಳುವುದರ ಮೂಲಕ ಈ ವ್ಯಕ್ತಿಯನ್ನು ವೇದಿಕೆಯ ಮೇಲೆ ಆಹ್ವಾನಿಸಿದ ಆಯೋಜಕರ ಮೇಲೂ ಕೂಡಾ ಕ್ರಮ ಕೈಗೊಳ್ಳಬೇಕೆಂದು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ, ಶಿವು ಲಮಾಣಿ, ಜಾನು ಲಮಾಣಿ, ಪುಂಡಲೀಕ ಲಮಾಣಿ, ಈರಣ್ಣ ಚವ್ಹಾಣ, ಪ್ರಕಾಶ ಬಡೆಣ್ಣವರ, ತಿಪ್ಪಣ್ಣ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.



