HomeCrime Newsಕುಡಿದ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ಶವದ ಸೆಲ್ಫಿ ವೀಡಿಯೋ ಮಾಡಿದ್ದ ಕಿರಾತಕ ಅರೆಸ್ಟ್!

ಕುಡಿದ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ಶವದ ಸೆಲ್ಫಿ ವೀಡಿಯೋ ಮಾಡಿದ್ದ ಕಿರಾತಕ ಅರೆಸ್ಟ್!

For Dai;y Updates Join Our whatsapp Group

Spread the love

ಹಾಸನ:- ಕುಡಿದ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ಶವದ ಮುಂದೆ ಸೆಲ್ಫಿ ವೀಡಿಯೋ ಮಾಡಿದ್ದ ಆರೋಪಿಯನ್ನು ಹಾಸನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಉಲ್ಲಾಸ್ (21) ಬಂಧಿತ ಆರೋಪಿ. ಈತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಸ್ನೇಹಿತ ಕೀರ್ತಿಯನ್ನು ಡಿ.8 ರಂದು ಕೊಲೆಗೈದಿದ್ದ. ಈ ಇಬ್ಬರು ಆಟೋ ಚಾಲಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು.

ಅತಿಯಾಗಿ ಮದ್ಯ ಸೇವಿಸಿ ಮಾತನಾಡುವಾಗ ಉಲ್ಲಾಸ್ ಕೆನ್ನೆಗೆ ಕೀರ್ತಿ ಬಾರಿಸಿದ್ದ. ಇದರಿಂದ ಕೋಪಗೊಂಡಿದ್ದ ಉಲ್ಲಾಸ್, ಮತ್ತೆ ಕುಡಿಯಲು ಆಟೋದಲ್ಲಿ ಕೀರ್ತಿ ಜೊತೆ ಇನ್ನಿಬ್ಬರನ್ನು ಕರೆದೊಯ್ದಿದ್ದ. ಬಳಿಕ ಜಗಳ ಆರಂಭಿಸಿ ಕೀರ್ತಿ ಮೇಲೆ ಹಲ್ಲೆ ನಡೆಸಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದ. ನಂತರ ಮದ್ಯದ ನಶೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದ.

ಇದೀಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!