HomeEntertainment75ಕ್ಕೆ ಕಾಲಿಟ್ಟ ತಲೈವಾ! ಶೂಟಿಂಗ್ ಮಧ್ಯೆಯೇ ರಜನಿಕಾಂತ್‌ಗೆ ಸರ್ಪ್ರೈಸ್ ಬರ್ಥ್‌ಡೇ ಸೆಲೆಬ್ರೇಶನ್

75ಕ್ಕೆ ಕಾಲಿಟ್ಟ ತಲೈವಾ! ಶೂಟಿಂಗ್ ಮಧ್ಯೆಯೇ ರಜನಿಕಾಂತ್‌ಗೆ ಸರ್ಪ್ರೈಸ್ ಬರ್ಥ್‌ಡೇ ಸೆಲೆಬ್ರೇಶನ್

For Dai;y Updates Join Our whatsapp Group

Spread the love

ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ 75ನೇ ಹುಟ್ಟುಹಬ್ಬವನ್ನು ಸೆಟ್‌ನಲ್ಲೇ ಸಂಭ್ರಮಿಸಿದರು. ಪ್ರಸ್ತುತ ಅವರು ‘ಜೈಲರ್ 2’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ತಂಡವೇ ತಲೈವಾಕ್ಕೆ ಸರ್ಪ್ರೈಸ್ ನೀಡಿದ್ದು, ಕೇಕ್ ಕತ್ತರಿಸಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ.

170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್, ಈ ಬಾರಿ ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ‘ಜೈಲರ್’ ಚಿತ್ರದ ಸೀಕ್ವೆಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟೇ 50 ವರ್ಷಗಳನ್ನು ಪೂರೈಸಿರುವ ರಜನಿಕಾಂತ್‌ರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಳೆ ಸುರಿದು ಬಂದಿದೆ.

1975ರ ‘ಅಪೂರ್ವ ರಾಗಂಗಳ್’ ಮೂಲಕ ಆರಂಭವಾದ ಅವರ ಸಿನಿಪಯಣ, ಇಂದು ಹಲವಾರು ಭಾಷೆಗಳಲ್ಲೂ ಮಿಂಚುವ ಮಟ್ಟಕ್ಕೆ ಬೆಳೆದಿದೆ. ಹುಟ್ಟುಹಬ್ಬದ ವಿಶೇಷವಾಗಿ, ರಜನಿಕಾಂತ್ ನಟಿಸಿದ ‘ಪಡೆಯಪ್ಪ’ ಸಿನಿಮಾ ಮತ್ತೆ ರಿ-ರಿಲೀಸ್ ಆಗಿದ್ದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ರಜನಿಕಾಂತ್‌ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಶುಭ ಹಾರೈಸಿದ್ದಾರೆ. ರಜನಿಕಾಂತ್‌ ಅವರ ಅಭಿನಯವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಬೆಂಚ್‌ಮಾರ್ಕ್‌ ಸೃಷ್ಟಿಸಿದೆ. ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದರಿಂದ ಈ ವರ್ಷ ಗಮನಾರ್ಹವಾಗಿವೆ. ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.

ಮೋದಿ ಅಲ್ಲದೇ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ದಕ್ಷಿಣ ಭಾರತದ ನಟ ಧನುಷ್ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ರಜನಿಕಾಂತ್ ಅವರಿಗೆ ಶುಭ ಹಾರೈಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!