ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಕಾರ್ಮಿಕ ಕಲ್ಯಾಣ ಸಂಸ್ಥೆಯ ವತಿಯಿಂದ ಶಾಸ್ತ್ರಜ್ಞ ಅನುದಾನಿತ ಪ್ರೌಢಶಾಲೆ ಕನ್ನಡ ಮಾಧ್ಯಮ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್‌ಬಿಎ ಕನ್ನಡ ಕೈಪಿಡಿ ಮತ್ತು 6 ವಿಷಯಗಳ ಮಾದರಿ ಪ್ರಶ್ನೆಗಳ ಕೈಪಿಡಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಡಾ. ದಾವಲಬಿ ನದಾಫ್ ತಿಳಿಸಿದ್ದಾರೆ.
ಗದಗ ನಗರ ವಲಯದ ಬಿಆರ್‌ಪಿ (ಪ್ರೌಢ) ವಿಭಾಗದ ಅಧಿಕಾರಿ ಹಾಗೂ ಶಾಲೆಯ ನೋಡಲ್ ಅಧಿಕಾರಿ ಎಂ.ಎ. ಯರಗುಡಿ ಮಾತನಾಡಿ, ಈ ಪುಸ್ತಕಗಳು 10ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗಳಿಗೆ ಪೂರಕವಾಗಿವೆ. ವಿದ್ಯಾರ್ಥಿಗಳು ತಮ್ಮ ನಿಶ್ಚಿತವಾದ ಗುರಿಯೊಂದಿಗೆ ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ಕುರಿತು ಗಮನ ಹರಿಸಬೇಕು ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ನೂರಅಹಮದ್ ನಾಗನೂರ ಮಾತನಾಡಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಮೂಲಕ ಮಕ್ಕಳಿಗೆ ಪುಸ್ತಕಗಳನ್ನು ಕೊಡಿಸಲು ಎಂ.ಎ. ಯರಗುಡಿ ಅವರು ಪ್ರಮುಖ ಪಾತ್ರ ವಹಿಸಿದ್ದು, ಅವರಿಗೆ ಶಾಲೆಯ ಶಿಕ್ಷಕರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಡಂಬಳ ಮಾತನಾಡಿ, ಬಡಮಕ್ಕಳ ಶಿಕ್ಷಣವನ್ನು ಉತ್ತೇಜಿಸುವುದು, ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುವುದು, ಓದಿನ ವಾತಾವರಣವನ್ನು ಸೃಷ್ಟಿಸುವುದು ಮತ್ತು ಸಮಗ್ರ ಮಾನವ ಯೋಗಕ್ಷೇಮಕ್ಕಾಗಿ ಸುಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ನಾಸೀರ ಚಿಕ್ಕೆನಕೊಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ Z.ಆ. ಬೇಲೇರಿ, ಮಲ್ಲಪ್ಪ ಜೀವಣ್ಣವರ್, ಭೀಮಪ್ಪ ಪೂಜಾರ್, ಮೊಹಮ್ಮದ್ ಯೂಸುಫ್ ಬೆಪಾರಿ, ನಿಂಗಪ್ಪ ಕಟ್ಟಿಮನಿ, ಖಾಜಾಸಾಬ್ ಗಬ್ಬುರ್, ಸಲೀಂ ಕಾತರಕಿ, ದುರ್ಗಪ್ಪ ಗುಡಿಮನಿ ಸೇರಿದಂತೆ ಕಾರ್ಮಿಕ ಕಲ್ಯಾಣ ಸಂಸ್ಥೆಯ ಸರ್ವ ಸದಸ್ಯರು, ಶಾಲೆಯ ಮೇಲ್ವಿಚಾರಕಿ ಇರಂ ಫರಹೀನ್, ಶಿಕ್ಷಕ ಬಳಗ, ವಿದ್ಯಾರ್ಥಿಗಳು, ಚಿತ್ರಕಲಾ ಶಿಕ್ಷಕರಾದ ಎಸ್.ಎಂ. ಕೋರಿ, ಎಸ್.ಎಂ. ಚಿಕ್ಕಣ್ಣವರ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಆರ್.ಎಚ್. ಅಸೂಟಿ ನಿರೂಪಿಸಿದರು. ಬಿ.ಎಚ್. ಜೋಗಿನ ವಂದಿಸಿದರು.



