ಹಾಸನ:-ಕಾಫಿ ಬೆಳೆಗಾರನಿಗೆ ಥಳಿಸಿ ಕಾಫಿ ಬೆಳೆ ಕಳವು ಮಾಡಿದ್ದ 6 ಮಂದಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಕಾಫಿ ಕಳ್ಳತನ ತಡೆಯಲು ಮುಂದಾದ ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಐವರು ಕಳ್ಳರು ಹಾಗೂ ಕಳ್ಳತನ ಮಾಡಿದ ಕಾಫಿ ಹಣ್ಣುಗಳನ್ನು ಖರೀದಿಸಿದ್ದ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 11ರಂದು ನಡೆದ ಈ ಘಟನೆಯಲ್ಲಿ ಆರೋಪಿಗಳು ಭಾರೀ ಪ್ರಮಾಣದ ಕಾಫಿ ಹಣ್ಣುಗಳನ್ನು ಕಳವು ಮಾಡಿದ್ದರು. ಅರೇಹಳ್ಳಿ ಗ್ರಾಮದ ಶಾಹಿದ್ ಮುಬಾರಕ್, ಜಹೀರ್, ಸಾಗರ್, ಪಜ್ವಲ್, ಹಜೀಜ್ ಮತ್ತು ವ್ಯಾಪಾರಿ ಸುನೀಲ್ ಬಂಧಿತರು.
ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವನ್ನು ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತಂಡವು ಯಶಸ್ವಿಯಾಗಿ ಭೇದಿಸಿದೆ.



