ಕನ್ನಡ ಧಾರಾವಾಹಿ ಪ್ರೇಕ್ಷಕರಿಗೆ ಪರಿಚಿತ ಮುಖವಾಗಿರುವ ನಟಿ ಗೀತಾ ಭಾರತಿ ಭಟ್ ಹೊಸ ಜೀವನ ಆರಂಭಿಸಿದ್ದಾರೆ. ಯಾವುದೇ ಗುಟ್ಟು ಬಿಡದ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಟಿಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ನವ ಜೋಡಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಗೀತಾ ಭಾರತಿ ಭಟ್ ಅವರು 2017ರಲ್ಲಿ ಪ್ರಸಾರ ಆರಂಭವಾದ ‘ಭ್ರಹ್ಮಗಂಟು ಧಾರಾವಾಹಿಯಲ್ಲಿ ಗುಂಡಮ್ಮ ಪಾತ್ರದಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಈ ಧಾರಾವಾಹಿ 2021ರವರೆಗೆ ಪ್ರಸಾರಗೊಂಡಿತ್ತು. ನಂತರ ಅವರು ‘ಬಿಗ್ ಬಾಸ್ ಕನ್ನಡʼ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ ಮೂರನೇ ವಾರದಲ್ಲೇ ಅವರು ಹೊರಬಂದಿದ್ದರು.
ನಂತರ ಗೀತಾ ಅವರು ‘Love Mocktail’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು ಸಾಕಷ್ಟು ಹೆಸರು ಮಾಡಿತ್ತು.ಸದ್ಯ ಭಾರತಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರ ಧಾರವಾಹಿಯಲ್ಲಿ ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಸದ್ಯ ಗೀತಾ ಭಾರತಿ ಭಟ್ ಅವರು ಯಾವುದೇ ಅಧಿಕೃತ ಘೋಷಣೆ ಇಲ್ಲದೆ ಮದುವೆಯಾಗಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಅಚ್ಚರಿಯನ್ನೂ ತಂದಿದೆ. ಆದರೆ ಮದುವೆಯಾದ ವ್ಯಕ್ತಿಯ ವಿವರಗಳು ಹಾಗೂ ವಿವಾಹದ ಸ್ವರೂಪದ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.
ಗೀತಾ ಭಾರತಿ ಭಟ್ ಅವರು ತಮ್ಮ ವೃತ್ತಿ ಜೀವನದಲ್ಲಿ ದೇಹದ ವಿಚಾರವಾಗಿ ಹಲವು ಬಾರಿ ಅವಮಾನಕಾರಿ ಟೀಕೆಗಳನ್ನು ಎದುರಿಸಿದ್ದಾರೆ. ಬಾಡಿ ಶೇಮಿಂಗ್ ವಿರುದ್ಧ ಅವರು ಧ್ವನಿ ಎತ್ತಿದ್ದು, ಈ ರೀತಿಯ ಟೀಕೆಗಳು ಸರಿಯಲ್ಲ ಎಂಬ ಸಂದೇಶವನ್ನು ಅನೇಕ ಬಾರಿ ನೀಡಿದ್ದಾರೆ.
ಇದೀಗ ವೈವಾಹಿಕ ಜೀವನ ಆರಂಭಿಸಿರುವ ಗೀತಾ ಭಾರತಿ ಭಟ್ ಅವರಿಗೆ ಅಭಿಮಾನಿಗಳಿಂದ ಅಭಿನಂದನೆಗಳು ಮುಂದುವರಿದಿವೆ.



