ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಎಸ್.ಬಿ. ನಗರ, ಬಸವನಗುಡಿ ಬಡಾವಣೆಯಲ್ಲಿ ಹೈ ಮಾಸ್ಟ್ ಬೀದಿ ದೀಪಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಉದ್ಘಾಟಿಸಿದರು.
ಹೈ ಮಾಸ್ಟ್ ದೀಪಗಳನ್ನು ಮಂಜೂರು ಮಾಡಿ ಬಡಾವಣೆಗೆ ಬೆಳಕು ನೀಡಿದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಬಡಾವಣೆ ಪರವಾಗಿ ವರಸಿದ್ಧಿ ವೀರಾಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷರು ಹಾಗೂ ಬಸವನಗುಡಿ ಬಡಾವಣೆ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಹರೀಶ ಪೂಜಾರ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಹಾಗೂ ಸದಸ್ಯರಾದ ಮಲ್ಲಿಕಾರ್ಜುನ ಐಲಿ, ಬಸವರಾಜ ಕಡೆಮನಿ, ಲಕ್ಷ್ಮಣ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಬಡಾವಣೆಯ ನಿವಾಸಿಗಳು ಉದ್ಯಾನವನದ ಅಭಿವೃದ್ಧಿಯ ಕುರಿತು ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ತಕ್ಷಣ 5 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡುವುದಾಗಿ ಪ್ರಾಧಿಕಾರದ ಅಧ್ಯಕ್ಷರ ಪರವಾಗಿ ಬಸವರಾಜ ಕಡೆಮನಿ, ಎಂ.ಸಿ. ಐಲಿ ಭರವಸೆ ನೀಡಿದರು.
ಎಸ್.ಎನ್. ಗದ್ದಿ ಸ್ವಾಗತಿಸಿದರು. ಶ್ರೀಧರ ಹಾಳಕೇರಿ ವಂದಿಸಿದರು. ವರಸಿದ್ಧಿ ವೀರಾಂಜನೇಯ ದೇವಸ್ಥಾನ ಕಮಿಟಿ ಅಧ್ಯಕ್ಷರು ಹರೀಶ ಪೂಜಾರ, ಕಾರ್ಯದರ್ಶಿ ವಿ.ಎ. ಸೋನಾರ್, ಉಪಾಧ್ಯಕ್ಷ ಎಸ್.ಎನ್. ತಕ್ಕೇದ, ಖಜಾಂಚಿ ಗವಿಸಿದ್ದಪ್ಪ ಛಲವಾದಿ, ಹಿರಿಯರಾದ ಆರ್.ಎಫ್. ಹಾಳಕೇರಿ, ಸಿ.ಎಸ್. ತೋಟಪ್ಪನವರ, ಶ್ರೀಧರ ಹಾಳಕೇರಿ, ಡಾ. ಬಸವರಾಜ ಚನ್ನಪ್ಪಗೌಡರ, ಹನಮಪ್ಪ ಹದ್ಲಿ, ಬಸವರಾಜ ಜಲ್ಲಿ, ಶಿವಪ್ಪ ಮಾಗುಂಡ ಮುಂತಾದವರು ಉಪಸ್ಥಿತರಿದ್ದರು.



