ವಿಜಯಸಾಕ್ಷಿ ಸುದ್ದಿ, ಗದಗ: ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ ಸಂಸ್ಥೆಯು ಕಳೆದ 26 ವರ್ಷಗಳಿಂದ ಆಯ್ದ ಅತ್ಯುತ್ತಮ ಕೃತಿಗಳಿಗೆ ರಾಷ್ಟ್ರಕೂಟ ಸಾಹಿತ್ಯಶ್ರೀ ರಾಜ್ಯ ಪ್ರಶಸ್ತಿ ನೀಡುತ್ತ ಬಂದಿದ್ದು, 2024ನೇ ಸಾಲಿಗಾಗಿ ಅತ್ಯುತ್ತಮ ಗದುಗಿನ ಮಕ್ಕಳ ಸಾಹಿತಿ ಡಾ. ತಯ್ಯಬಅಲಿ ಅ. ಹೊಂಬಳರವರ ಮಕ್ಕಳ ಸಚಿತ್ರ ಕಥಾ ಸಂಕಲನ ಬಾರೋ ಬಾರೋ ಚಂದ್ರಮ ಕೃತಿ ಆಯ್ಕೆಯಾಗಿದೆ.
ಹೊಂಬೆಳಕು ಸಾಂಸ್ಕೃತಿಕ ಸಂಘ ಬೆಳಗಾವಿ ಹಾಗೂ ಧಾರವಾಡದ ಶ್ರೀ ಚೆನ್ನಲೀಲಾ ಟ್ರಸ್ಟ್ ಸಂಯುಕ್ತವಾಗಿ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ಡಿ. 27ರಂದು ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ ಡಾ. ತಯ್ಯಬಅಲಿ ಅ. ಹೊಂಬಳರಿಗೆ ಬೆಳಗಾವಿ ಹೊಂಬೆಳಕು ಸಾಂಸ್ಕೃತಿಕ ಸಂಘದ ಆಯ್ಕೆ ಸಮಿತಿ ಸದಸ್ಯರಾದ ಸ.ರಾ. ಸುಳಕೂಡೆ, ಶಶಿಕಲಾ ಪಾವಸೆ, ಲೀಲಾ ಕಲಕೋಟಿ, ಆರ್.ಬಿ. ಬನಶಂಕರಿ, ಡಾ. ಗೀತಾಂಜಲಿ ಕುರಡಗಿ, ಎ. ಮಾವುತ, ಡಾ. ಜಗದೀಶ ಹಾರೋಗೊಪ್ಪ, ಮಮತಾ ಶಂಕರ ಸಮಿತಿಯ ಪರವಾಗಿ ಅಭಿನಂದಿಸಿದ್ದಾರೆ.



