ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲವಿನಾಯಕ ವಿದ್ಯಾನಿಕೇತನ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಏರೊಬಿಕ್ಸ್ ತರಬೇತುದಾರ ವಿನೋದ ವಿ.ಅಕ್ಕಿ ಹಾಗೂ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಪಟು ಮಧುರಾ ವಿ.ಅಕ್ಕಿ ಅವರು ಒಲಂಪಿಕ್ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿನೋದ ವಿ.ಅಕ್ಕಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆಗಳ ಜೊತೆಗೆ ವಿದ್ಯಾಭ್ಯಾಸವೂ ಮುಖ್ಯ. ಕ್ರೀಡೆಗಳು ಬದುಕಿನಲ್ಲಿ ಶಿಸ್ತನ್ನು ಕಲಿಸುತ್ತವೆ. ಒಬ್ಬ ಉತ್ತಮ ಕ್ರೀಡಾಪಟುವಾಗಲು ಮುಂಜಾನೆ ಬೇಗ ಏಳಬೇಕು ಮತ್ತು ದಿನನಿತ್ಯ ಆಟದ ಅಭ್ಯಾಸ ಮಾಡಬೇಕೆಂದರು.
ಶಾಲಾ ಅಧ್ಯಕ್ಷರಾದ ಎಸ್. ರವಿ, ಇ.ಎಲ್.ಸಿ.ಯ ಮುಖ್ಯಸ್ಥರಾದ ಆರ್. ಮಲ್ಲಿಕಾ, ಪ್ಲೇ ಹೋಮ್ ಮುಖ್ಯಸ್ಥರಾದ ಗಂಗಾ, ಶಾಲೆಯ ನಿರ್ದೇಶಕರಾದ ವಿನಾಯಕ ಆರ್, ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರು ಸದನಗಳಿಂದ ಆಕರ್ಷಕ ಪಥಸಂಚಲನ ನಡೆಸಿ, ಒಲಂಪಿಕ್ ಧ್ವಜಕ್ಕೆ ಮತ್ತು ಅತಿಥಿಗಳಿಗೆ ಸೆಲ್ಯೂಟ್ ನೀಡಿದರು. ದೈಹಿಕ ಶಿಕ್ಷಕರಾದ ಮಂಜುನಾಥ ಅಂಗಡಿ ಆಟಗಾರರಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಪಂಡಿತ ಪುಟ್ಟರಾಜ ಮ್ಯೂಸಿಕ್ ಕ್ಲಬ್ ವತಿಯಿಂದ ಪ್ರಗತಿ ಮಾಳಶೆಟ್ಟಿ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಅಂಜಲಿ ಶ್ಯಾವಿ ಅತಿಥಿಗಳನ್ನು ಪರಿಚಯಿಸಿದರೆ, ಹಾಜಿರಾ ಇಟಗಿ ಸ್ವಾಗತಿಸಿದರು. ವರ್ಷಾ ತೊಪಲಕಟ್ಟಿ ವಂದಿಸಿದರು.



