ಹಾಸನ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ಘಟನೆ ಇಂದು (ಸೋಮವಾರ) ವರದಿಯಾಗಿದೆ.
‘ಹಾಸನ ಕಲೆಕ್ಟರ್ ಅಂಡ್ ಸ್ಟಾಫ್’ ಹೆಸರಿನಲ್ಲಿ ಆರ್ಮಾ ಅಶ್ದಿನ್ ಶೇಖರ್ ಎನ್ನುವವರಿಂದ ಮೇಲ್ ಬಂದಿದ್ದು, ಪಾಕಿಸ್ತಾನ ಐಎಸ್‌ಐ ಸೆಲ್ ಸಂಬಂಧಿತ ಬೆದರಿಕೆ ಉಲ್ಲೇಖಿಸಲಾಗಿದೆ. ಮೇಲ್ ಬಂದ ತಕ್ಷಣ ಉಪವಿಭಾಗಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಜಿಲ್ಲಾ ಪೊಲೀಸರು ಹಾಗೂ ಶ್ವಾನದಳ ಕಚೇರಿ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, “ಇ-ಮೇಲ್‌ನ ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತಿದೆ. ಯಾವುದೇ ಗಂಭೀರ ವಿಷಯ ಇಲ್ಲ. ಸಾರ್ವಜನಿಕರು ಆತಂಕಪಡಬೇಕಾಗಿಲ್ಲ” ಎಂದು ತಿಳಿಸಿದ್ದಾರೆ.



