ವಿಜಯಸಾಕ್ಷಿ ಸುದ್ದಿ, ಗದಗ: ಭಾರತ ಕಮ್ಯುನಿಸ್ಟ್ ಪಕ್ಷ ಭಾರತ ದೇಶದಲ್ಲಿ, ಮತ-ಧರ್ಮಗಳ ಸಂಘರ್ಷವಿಲ್ಲದ, ಮೇಲು-ಕೀಳುಗಳಿಲ್ಲದ, ಶಾಂತಿ-ಸಹಬಾಳ್ವೆ, ಸೌಹಾರ್ದತೆಯ ಜೊತೆಗೆ ಸಮತಾ ರಾಜ್ಯದ ಕನಸುಗಳೊಂದಿಗೆ ಡಿಸೆಂಬರ್ 26, 2025ಕ್ಕೆ ಶತಮಾನೋತ್ಸವ ಆಚರಿಸುತ್ತಿದೆ. ಈ ಸಂಭ್ರಮದ ಹಿನ್ನೆಲೆ ರಾಜ್ಯಾದ್ಯಂತ ಜಾಥಾ ನಡೆಸುತ್ತಿದ್ದು, ಮಂಗಳವಾರ ಗದಗ ನಗರದ ಭೂಮರಡ್ಡಿ ವೃತ್ತಕ್ಕೆ ಪಾದಯಾತ್ರೆ ಆಗಮಿಸಿತು.
ಗಾಂಧಿವೃತ್ತದ ಬಳಿ ಬಹಿರಂಗ ಸಭೆಯಲ್ಲಿ ಪಕ್ಷದ ನಾಯಕರು ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಪಕ್ಷ, ಸಂಘಟನೆಗಳು ನಮ್ಮ ಜನರ ಸ್ವಾತಂತ್ರ್ಯವನ್ನು ನಾಶ ಮಾಡಿವೆ. ಬಡತನ, ನಿರುದ್ಯೋಗ, ಅತ್ಯಾಚಾರ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಕಾರ್ಮಿಕರ ಹಕ್ಕುಗಳ ನಾಶ, ವಿದ್ಯಾರ್ಥಿ ಯುವಜನರಲ್ಲಿ ಹತಾಶೆ, ನೆಲ-ಜಲ ದೇಶದ ಮತ್ತು ರಾಜ್ಯದ ಸಾರ್ವಜನಿಕ ಸಂಪತ್ತಿನ ಲೂಟಿ ಹೆಚ್ಚಾಗಿದೆ ಎಂದರು.
ಜಾಥಾದಲ್ಲಿ ಗದಗ ಜಿಲ್ಲಾ ಎ.ಐ.ಟಿ.ಯು.ಸಿ ಸಂಯೋಜಿತ ಗದಗ ಜಿಲ್ಲಾ ಸಮಿತಿ ಅಧ್ಯಕ್ಷ ಕಾ. ಎಮ್.ಐ. ನವಲೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಅರಮನಿ, ಅಡಿವೆಪ್ಪ ಚಲವಾದಿ, ಈಶ್ವರ ಲಕ್ಷ್ಮೇಶ್ವರ, ಕೊಪ್ಪಳ ಜಿಲ್ಲಾ ಸಮಿತಿ ಸಿಪಿಐ ಎ.ಎಲ್. ತಿಮ್ಮಣ್ಣ, ಹುಲಗಪ್ಪ, ಮಂಜುನಾಥ, ಲಕ್ಷ್ಮಣ ನಾಯಕ, ತಿಮ್ಮಣ್ಣ ಗುಡೂರ, ಮಲ್ಲಯ್ಯ, ಹನಮಂತ ಚಿತ್ರಗಾರ, ಮೋದಿನಸಾಬ ನರಗುಂದ, ಫಾರುಕ ಅಲಿ, ಹುಸೇನಸಾಬ ಈಟಿ, ಮಹೇಶ, ಗದಗ ಡಿಎಸ್ಎಸ್ ಹಿರಿಯ ನಾಯಕರಾದ ಬಸವರಾಜ ಪೂಜಾರ, ರಮೇಶ ಬಾಳಮ್ಮನವರ, ವೆಂಕಟೇಶಯ್ಯ ಸಂತೋಷ ಹೆಚ್.ಎನ್., ಮೋನಪ್ಪ ಎ.ಸಿ. ಷಣ್ಮುಖ ಸ್ವಾಮಿ, ಹುಲಿಗೆಪ್ಪ, ತಿಮ್ಮಣ್ಣ ಎಲ್ ಮತ್ತು ಗದಗ ನಗರದ ಕಟ್ಟಡ ಕಾರ್ಮಿಕರು ಇದ್ದರು.



