ಗದಗ: ತಾಲೂಕಿನ ತಿಮ್ಮಾಪೂರ, ಹರ್ಲಾಪೂರ, ಲಕ್ಕುಂಡಿ, ಹಾತಲಗೇರಿ ಗ್ರಾಮದ ರೈತರು ಎಳ್ಳು ಅಮಾವಾಸ್ಯೆಯ ನಿಮಿತ್ತ ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಕಡಲೆ, ಗೋಧಿ, ಜೋಳದ ಬೆಳೆಗಳಿಗೆ ಪೂಜೆ ಸಲ್ಲಿಸಿದರು.
ರೈತರು ಕುಟುಂಬ ಪರಿವಾರ ಸಮೇತರಾಗಿ ಜಮೀನಿನ ಬೆಳೆಯ ಮಧ್ಯೆ ಇರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ತಮ್ಮ ಜಮೀನಿನಲ್ಲಿ ಕುಟುಂಬ ಸಮೇತರಾಗಿ ಭೂಮಿಗೆ ಬಾಗಿನ ಅರ್ಪಿಸಿ ರಾಜ್ಯದಲ್ಲಿ ರೈತರು ಬೆಳೆದ ಎಲ್ಲಾ ಬೆಳೆಗಳು ಹುಲುಸಾಗಿ ಬೆಳೆದು ಉತ್ತಮ ಇಳುವರಿ ಬರಲಿ ಎಂದು ಪ್ರಾರ್ಥಿಸಿದರು.



