ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಮುಂದುವರಿದಿದೆ. ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ಗಳಾಗಿ ಮನೆಗೆ ಬಂದಿದ್ದ ರಜತ್ ಮತ್ತು ಚೈತ್ರಾ ವಾಸ್ತವದಲ್ಲಿ ಅತಿಥಿಗಳಾಗಿಯೇ ಎಂಟ್ರಿ ಕೊಟ್ಟಿದ್ದರು ಎಂದು ಬಿಗ್ಬಾಸ್ ಸ್ಪಷ್ಟಪಡಿಸಿದ್ದಾರೆ.
ಸೀಸನ್ ಆರಂಭದಿಂದಲೂ ಬಿಗ್ಬಾಸ್ ಹೊಸ ಹೊಸ ತಿರುವುಗಳನ್ನು ನೀಡುತ್ತಲೇ ಬಂದಿದ್ದಾರೆ. ರಕ್ಷಿತಾಳನ್ನು ಮೊದಲಿಗೆ ಮನೆಗೆ ಕಳುಹಿಸಿ, ಒಂದು ವಾರದಲ್ಲೇ ವಾಪಸ್ ಕರೆಸಿದ್ದು, ಬಳಿಕ ಮೂವರು ವೈಲ್ಡ್ ಕಾರ್ಡ್ ಎಂಟ್ರಿಗಳು, ಹಳೆಯ ಗೆಸ್ಟ್ಗಳನ್ನು ಮತ್ತೆ ಮನೆಗೆ ಕರೆಸಿ, ಅದರಲ್ಲಿ ಇಬ್ಬರನ್ನು ವೈಲ್ಡ್ ಕಾರ್ಡ್ ಎಂದು ಘೋಷಿಸಿದ್ದ ಘಟನೆಗಳು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದವು. ಇದೀಗ ಆ ಇಬ್ಬರೂ ಕಂಟೆಸ್ಟೆಂಟ್ಗಳಲ್ಲ, ಅತಿಥಿಗಳು ಎಂದು ಹೇಳುವ ಮೂಲಕ ಆಟವನ್ನೇ ಬದಲಿಸಲಾಗಿದೆ.
ರಜತ್ ಮತ್ತು ಚೈತ್ರಾ ಮನೆ ಒಳಗೆ ಇದ್ದ ಅವಧಿಯಲ್ಲಿ ಎಲ್ಲರ ಜೊತೆಗೆ ತೀವ್ರ ಸ್ಪರ್ಧೆ ನಡೆಸಿದ್ದರು. ಆದರೆ ಮೊದಲೇ ಮಾಡಿಕೊಂಡಿದ್ದ ಒಪ್ಪಂದದಂತೆ ಅವರು ಮನೆಯಿಂದ ಹೊರಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ವೋಟಿಂಗ್ ಪ್ರಕ್ರಿಯೆ ನಡೆಯಲಿಲ್ಲ.



