ವಿಜಯಸಾಕ್ಷಿ ಸುದ್ದಿ, ಗದಗ: ಸ್ವಚ್ಛ ಭಾರತ ಮಿಷನ್-2.0 ಅಡಿಯಲ್ಲಿ ಗದಗ-ಬೆಟಗೇರಿ ನಗರಸಭೆ ವತಿಯಿಂದ ಘನ ತ್ಯಾಜ್ಯ ನಿರ್ವಹಣೆ ಕುರಿತು ಸ್ವಚ್ಛತಾ ಇ-ಸೇವಾ ಯೋಜನೆ ಅಡಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ವಾರ್ಡ್ ನಂ. 23ರ ಸರ್ಕಲ್‌ನಲ್ಲಿ ಸ್ಮಾರ್ಟ್ ಪಾಯಿಂಟ್ ಆಗಿ ಪರಿವರ್ತಿಸುವುದು, ಹಸಿ ಕಸ-ಒಣ ಕಸವನ್ನು ಬೇರ್ಪಡಿಸುವುದರ ಕುರಿತು ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲಕರಿಗೆ ಮನವರಿಕೆ ಮಾಡಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಫಕೀರಪ್ಪ ಹೆಬಸೂರ, ನಾಗಪ್ಪ ಗುಗ್ಗರಿ, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು.
ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ ಪವಾರ, ನಗರಸಭೆ ಪರಿಸರ ಅಭಿಯಂತರ ಆನಂದ್ ಬದಿ, ಆರೋಗ್ಯ ಅಧಿಕಾರಿಗಳಾದ ಎಂ.ಎ. ಮಕಾನದಾರ, ಸೂಪರ್‌ವೈಸರ್ ಸಿ.ಆರ್. ಹಾದಿಮನಿ, ಸಣ್ಣಪ್ಪ ಬೋಳಮನವರ್, ಟ್ರ‍್ಯಾಕ್ಟರ್ ಚಾಲಕರು, ಪೌರ ಕಾರ್ಮಿಕರು, ಸ್ವಸಹಾಯ ಗುಂಪುಗಳ ಸದಸ್ಯರು, ಸಾರ್ವಜನಿಕರು, ಕಮ್ಯುನಿಟಿ ಮುಬಲೈಸರ್ ನಾಗಮ್ಮ ಬಳ್ಳಾರಿ, ವಸಂತಲಕ್ಷ್ಮಿ ರಾಮಗಿರಿ ಮುಂತಾದವರು ಉಪಸ್ಥಿತರಿದ್ದರು.



