ಬೆಂಗಳೂರು:- ಬೆಂಗಳೂರು ಮತ್ತು ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದಾರೆ.
ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 184–221 ರ ನಡುವೆ ವರದಿಯಾಗಿದ್ದು, ಅನಾರೋಗ್ಯಕರದಿಂದ ತುಂಬಾ ಅನಾರೋಗ್ಯಕರ ಮಟ್ಟವಿರುವುದಾಗಿ ತೋರಿಸುತ್ತದೆ. ವಿಶೇಷವಾಗಿ ಭೋಗನಹಳ್ಳಿ, ಪಾಮ್ ಮೆಡೋಸ್, ಬೆಳತ್ತೂರು, ಅರೆಕೆರೆ, ಬೊಮ್ಮನಹಳ್ಳಿ ಪ್ರದೇಶಗಳಲ್ಲಿ ಗಾಳಿಯ ದಟ್ಟತೆ ಹೆಚ್ಚಾಗಿದೆ, ಇದರಿಂದ ಉಸಿರಾಟದ ತೊಂದರೆ, ಗಂಟಲು ಕಿರಿಕಿರಿ ಮತ್ತು ಆರೋಗ್ಯದ ಇತರ ಸಮಸ್ಯೆಗಳ ಸಂಭವನೀಯತೆ ಹೆಚ್ಚಾಗುತ್ತದೆ.
PM2.5 ಪ್ರಮಾಣ 96 µg/m³ ಮತ್ತು PM10 ಪ್ರಮಾಣ 132 µg/m³ ರಷ್ಟು ದಾಖಲಾಗಿದ್ದು, ಇದು ಶ್ವಾಸಕೋಶದ ಸಮಸ್ಯೆ ಇರುವವರು ಮತ್ತು ಮಕ್ಕಳಿಗೆ ಹೆಚ್ಚಿನ ಅಪಾಯ ಉಂಟುಮಾಡಬಹುದು. ರಾಜ್ಯದ ಇತರ ಪ್ರಮುಖ ನಗರಗಳಾದ ಮಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ ಮತ್ತು ಹುಬ್ಬಳ್ಳಿ ಮುಂತಾದ ಸ್ಥಳಗಳಲ್ಲೂ ಗಾಳಿಯ ಗುಣಮಟ್ಟ ಕಳಪೆ ಅಥವಾ ಅನಾರೋಗ್ಯಕರ ಮಟ್ಟದಲ್ಲಿದೆ. ತಜ್ಞರು ಬಹುಮಟ್ಟದ ಮಾಲಿನ್ಯ ಪ್ರದೇಶಗಳಲ್ಲಿ ಹೊರಗೆ ಹೋಗುವ ಮುನ್ನ N95 ಮಾಸ್ಕ್ ಧರಿಸುವಂತೆ ಹಾಗೂ ವೃದ್ಧರು, ಮಕ್ಕಳು ಮತ್ತು ಉಸಿರಾಟದ ಸಮಸ್ಯೆ ಇರುವವರು ಮನೆಯಲ್ಲಿ ಇರಲು ಸಲಹೆ ನೀಡಿದ್ದಾರೆ.
ಮುಂದಿನ 7 ದಿನಗಳಲ್ಲಿ ಚಳಿ ಮತ್ತು ಮಂಜು ವಾತಾವರಣದಿಂದ ಗಾಳಿಯ ಗುಣಮಟ್ಟದಲ್ಲಿ ಹೆಚ್ಚುವರಿ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ, ಆದ್ದರಿಂದ ನಾಗರಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.



