ಚಿಕ್ಕಮಗಳೂರು:- ಚಿರತೆಯೊಂದು ಮಲಗಿದ್ದ ನಾಯಿಯನ್ನ ಎಬ್ಬಿಸಿ ಹೊಡೆದು ಕೊಂದು ಬಳಿಕ ಹೊತ್ತೊಯ್ದಿರುವ ಘಟನೆ ತರೀಕೆರೆ ತಾಲೂಕಿನ ಜಾತ್ರೆ ಮೈದಾನ ಗ್ರಾಮದಲ್ಲಿ ಜರುಗಿದೆ.
ಜಾತ್ರೆ ಮೈದಾನದ ಗ್ರಾಮದ ಫೋಟೋ ಬಸವರಾಜ್ ಎಂಬುವರ ಮನೆಯಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ನಲ್ಲಿ ಬಂದು ಚಿರತೆಯೂ ನಾಯಿ ಬೇಟೆಯಾಡುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಮಲಗಿದ್ದ ನಾಯಿಯನ್ನ ಎಬ್ಬಿಸಿ ಬಳಿಕ ತನ್ನ ಹಲ್ಲಲ್ಲಿ ಸೀಳಿ ಕೊಲೆಗೈದು ಎಳೆದೊಯ್ದಿದೆ.
ಒಣಹಾಕಿದ್ದ ಅಡಕೆ ಕಾವಲಿಗೆ ನಾಯಿಯನ್ನು ಬಿಡಲಾಗಿತ್ತು. ಈ ವೇಳೆ ಚಿರತೆ ದಾಳಿ ಮಾಡಿದೆ. ನಾಯಿಯನ್ನು ಚಿರತೆ ಸೂಕ್ಷ್ಮವಾಗಿ ಹೆಜ್ಜೆ ಇಟ್ಟು ಬೇಟೆಯಾಡಿ ಕೊಂದು, ಬಳಿಕ ಎಳೆದೊಯ್ದಿದೆ. ಚಿರತೆಯ ಸೂಕ್ಷ್ಮ ಚಲನ-ವಲನಗಳು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.



