ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ತಾಲೂಕಿನ ಪು.ಬಡ್ನಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 4ನೇ ಬಾರಿಗೆ ಸತೀಶಗೌಡ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಮರಿಹೊಳಲಣ್ಣವರ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 12 ನಿರ್ದೇಶಕರ ಸ್ಥಾನಗಳೂ ಅವಿರೋಧ ಆಯ್ಕೆಯಾದವು.
ನಿರ್ದೇಶಕರಾಗಿ ದೇವಪ್ಪ ಕೊರಕನವರ, ಶಿವಪುತ್ರಪ್ಪ ಚೋಟಗಲ್, ಶೇಖಪ್ಪ ಕರೆಣ್ಣೆವರ, ಹಸನಸಾಬ ಭಾವಿಕಟ್ಟಿ, ದ್ರಾಕ್ಷಾಯಿಣವ್ವ ಅತ್ತಿಗೇರಿ, ಲಲಿತಾ ಹರದಗಟ್ಟೆ, ಹಾಲಪ್ಪ ಸೂರಣಗಿ, ಕುಮಾರಸ್ವಾಮಿ ಹಿರೇಮಠ, ಹನಮಂತಪ್ಪ ಮಾದರ, ನಾಗಪ್ಪ ಮಸೂತಿ ಅವರು ಅವಿರೋಧ ಆಯ್ಕೆಯಾದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ವಿ. ಪಾಟೀಲ ಇದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಆರ್. ನಿಡಗುಂದಿ ಕಾರ್ಯ ನಿರ್ವಹಿಸಿದರು.



