ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಪ್ರತಿಭಾ ಕಾರಂಜಿ ಎಂಬುದು ಕಲಾ ಪ್ರತಿಭೆಗಳ ಚಿಣ್ಣರ ಹಬ್ಬ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಬಿಇಓ ಎಚ್. ನಾಣಕೀ ನಾಯ್ಕ ಹೇಳಿದರು.
ಅವರು ಬುಧವಾರ ಪಟ್ಟಣದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ನಂ. 1ರಲ್ಲಿ ಹಮ್ಮಿಕೊಂಡಿದ್ದ ಲಕ್ಷೇಶ್ವರ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕವನ ವಾಚನ, ಗಾಯನ, ಚಿತ್ರಕಲೆ, ಪ್ರಬಂಧ, ಚರ್ಚಾ ಸ್ಪರ್ಧೆ, ಕ್ಲೇ ಮಾಡೆಲಿಂಗ್ ಇನ್ನೂ ಅನೇಕ ಕಲಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿರುವ ಕಲಾಭಿರುಚಿಯ ಸಾಮರ್ಥ್ಯವನ್ನು ಸಾಬೀತು ಮಾಡಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಎಸ್.ಕೆ. ಹವಾಲ್ದಾರ, ಎಸ್‌ಡಿಎಮ್‌ಸಿ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಮುಖ್ಯ ಶಿಕ್ಷಕಿ ಅಂಬಿಕಾ ಕೆ.ಎಸ್, ಸದಸ್ಯರಾದ ದರವೇಶ ನಾಳಬಂದ, ಆದಮ್ ನಾಯಕ, ಅಬ್ದುಲ್ ಕೆ.ಗುಡಗೇರಿ, ಸಾಹೇಬಜಾನ ಹವಾಲ್ದಾರ, ರಾಘವೇಂದ್ರ ಜೋಶಿ, ಬಿ.ಎಸ್. ಹರ್ಲಾಪುರ, ಚಂದ್ರಕಾತ ನೇಕಾರ, ಬಿ.ಎಂ. ಯರಗುಪ್ಪಿ ಸೇರಿ ಕ್ಲಸ್ಟರಿನ ಶಿಕ್ಷಕರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳು ಮತ್ತು ದಾನಿಗಳಾದ ಅಷ್ಪಾಕ್ ಮುಳಗುಂದ, ಇಸ್ಮಾಯಿಲ್ ಕಲ್ಬುರ್ಗಿ, ಸಲೀಂ ಕರೀಮಖಾನ್ ನವರ ಅವರನ್ನು ಸನ್ಮಾನಿಸಲಾಯಿತು. ಸಿಆರ್‌ಪಿ ಎನ್.ಎ. ಮುಲ್ಲಾ, ಎ.ಎ. ಪುಲ್ಲಿ, ಎ.ಐ. ಮಿಯಾನವರ ನಿರೂಪಿಸಿದರು.



