ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲ್ಯಾಪ್ಟಾಪ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ರಾಜದೋರೈ ಹಾಗೂ ಗೌತಮ್ ಬಂಧಿತ ಆರೋಪಿಗಲಾಗಿದ್ದು, ತಮಿಳುನಾಡು ಮೂಲದ ಗೌತಮ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದನು.
ಗೌತಮ್, ತಮಿಳುನಾಡು ಮೂಲದ ಡಾಟಾ ಅನಾಲಿಸ್ಟ್ ಹಾಗೂ ಲ್ಯಾಪ್‌ಟಾಪ್ ಶಾಪ್ ಮಾಲೀಕನಾಗಿದ್ದು, ರಾಜದೋರೈ ಮೂಲಕ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿಸಿ ಮಾರಾಟ ಮಾಡುತ್ತಿದ್ದನು. ರಾಜದೊರೈ ಪಿಜಿ ಗಳನ್ನ ಗುರುತಿಸಿ ಕಳ್ಳತನ ಮಾಡುತ್ತಿದ್ದನು. ಸದ್ಯ ಸಿಸಿಟಿವಿ ಆದರಿಸಿ ಆರೋಪಿ ಬಂಧಿಸಿದ್ದು,
ಆರೋಪಿ ಕೊಟ್ಟ ಮಾಹಿತಿ ಮೇರೆಗೆ ರಿಸೀವರ್ ಗೌತಮ್ ನನ್ನು ಬಂಧಿಸಲಾಗಿದೆ. ಬಂಧಿತರಿಂದ 40 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 48 ಲ್ಯಾಪ್ ಟ್ಯಾಪ್ ಗಳು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



