ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಮತ್ತೆ ಭರ್ಜರಿ ಸದ್ದು ಮಾಡುತ್ತಿದೆ. ಈ ಬಾರಿ ಚಿತ್ರದ ಐದನೇ ನಾಯಕಿಯ ಲುಕ್ ಬಿಡುಗಡೆ ಆಗಿದ್ದು, ನಟಿ ರುಕ್ಮಿಣಿ ವಸಂತ್ ಗ್ಲ್ಯಾಮರ್ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲ್ಲಿಸಾ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ಬಿಡುಗಡೆ ಮಾಡಲಾದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈಗಾಗಲೇ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ನಯನತಾರಾ, ಹುಮಾ ಖುರೇಶಿ ಮತ್ತು ತಾರಾ ಸುತಾರಿಯಾ ಅವರ ಲುಕ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ರುಕ್ಮಿಣಿ ವಸಂತ್ ಅವರ ಪರಿಚಯದೊಂದಿಗೆ ಚಿತ್ರದ ಐದು ಪ್ರಮುಖ ನಾಯಕಿಯರ ಅನಾವರಣ ಸಂಪೂರ್ಣಗೊಂಡಿದೆ.
ಕಳೆದ ಒಂದು ತಿಂಗಳಿನಿಂದ ಒಂದೊಂದೇ ಪಾತ್ರಗಳ ಇಂಟ್ರೊಡಕ್ಷನ್ ಮೂಲಕ ಕುತೂಹಲ ಹೆಚ್ಚಿಸಿದ್ದ ಯಶ್ ತಂಡ, ಇದೀಗ ಅಭಿಮಾನಿಗಳಿಗೆ ಫುಲ್ ಅಪ್ಡೇಟ್ ನೀಡಿದೆ.
ಜನವರಿ 8ರಂದು ಯಶ್ ಹುಟ್ಟುಹಬ್ಬ ಇರುವುದರಿಂದ ಟಾಕ್ಸಿಕ್ ಟೀಸರ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಟೀಸರ್ನಲ್ಲಿ ಐವರು ನಾಯಕಿಯರ ಲುಕ್ ಒಂದೇ ಸಲ ರಿವೀಲ್ ಆಗುವ ಸಾಧ್ಯತೆಯೂ ಇದೆ ಎಂದು ಸಿನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.



