ಕೆಜಿಎಫ್ 2 ನಂತರ ಯಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಪ್ರಶ್ನೆಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ. ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಯಶ್ ಬರ್ತ್ಡೇ ದಿನವೇ ರಿಲೀಸ್ ಆಗಿದ್ದು, ಫ್ಯಾನ್ಸ್ನಲ್ಲಿ ಹವಾ ಸೃಷ್ಟಿಸಿದೆ.
ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಟಾಕ್ಸಿಕ್’ ಮೂಲಕ ಯಶ್ ಮತ್ತೆ ಪ್ಯಾನ್-ವರ್ಡ್ ಲೆವಲ್ ಸಿನಿಮಾಗೆ ಕಾಲಿಟ್ಟಿದ್ದಾರೆ. ಯಶ್ ಹುಟ್ಟುಹಬ್ಬದ ದಿನವೇ ಟೀಸರ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ನಿರ್ದೇಶಕಿ, ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
ಟೀಸರ್ ಆರಂಭವಾಗುವುದು ಸ್ಮಶಾನದ ದೃಶ್ಯಗಳಿಂದ. ಮೊದಲಿಗೆ ಗದ್ದಲ, ಗಲಾಟೆ ನಡೆಯುತ್ತದೆ. ಬಳಿಕ ಅಸಲಿ ಆಟ ಶುರುವಾಗುತ್ತದೆ. ಯಶ್ ಶರ್ಟ್ಲೆಸ್ ಲುಕ್ನಲ್ಲಿ, ಬ್ಯಾಕ್ ಶಾಟ್ನಿಂದ ಎಂಟ್ರಿ ಕೊಡುತ್ತಾರೆ. ಬೂಟುಗಾಲಿನಿಂದ ಬುಲೆಟ್ಸ್ ಹೊರಬಿಡುವ ದೃಶ್ಯ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡಿದೆ.
ಗೀತು ಮೋಹನ್ದಾಸ್ ತಮ್ಮ ಹಿಂದಿನ ಸಿನಿಮಾಗಳಲ್ಲಿ ಪಾತ್ರಗಳನ್ನು ಹೇಗೆ ವಿಭಿನ್ನವಾಗಿ ತೋರಿಸಿದ್ದರೋ, ಅದೇ ಶೈಲಿಯಲ್ಲಿ ಯಶ್ ಪಾತ್ರವನ್ನೂ ಪ್ರಸ್ತುತಪಡಿಸಿರುವುದು ಟೀಸರ್ನ ವಿಶೇಷತೆ. ಇದು ಸಂಪೂರ್ಣವಾಗಿ ಹೊಸ ಯಶ್ ಅನ್ನೋ ಭಾವನೆ ಮೂಡಿಸುತ್ತದೆ.
ಇನ್ನು ‘ಟಾಕ್ಸಿಕ್’ ಸಿನಿಮಾ ಹಿಂದಿಯಲ್ಲಿ ಸೂಪರ್ ಹಿಟ್ ಆದ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಜೊತೆ ಕ್ಲ್ಯಾಶ್ ಆಗುತ್ತಿದೆ. ಇದರಿಂದ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಈ ಸವಾಲನ್ನು ಎದುರಿಸಲು ಟಾಕ್ಸಿಕ್ ತಂಡ ಎಲ್ಲ ರೀತಿಯ ತಂತ್ರ ರೂಪಿಸಿಕೊಂಡಿದೆ.



