ವಿಜಯಸಾಕ್ಷಿ ಸುದ್ದಿ, ಗದಗ: 2025-26ನೇ ಸಾಲಿನಲ್ಲಿ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೃಹರಕ್ಷಕ ದಳ ಗದಗ ಜಿಲ್ಲಾ ಕಚೇರಿಯ ಸಿಬ್ಬಂದಿ ಟಿ.ಎಲ್. ರಾಜಕುಮಾರ ಅವರು ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್ನಲ್ಲಿ ಪ್ರಥಮ ಸ್ಥಾನ (45 ವರ್ಷ ಮೇಲ್ಪಟ್ಟು ವಿಭಾಗದಲ್ಲಿ) ಹಾಗೂ ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ದ್ವಿತೀಯ ಸ್ಥಾನ (45 ವರ್ಷ ಒಳಪಟ್ಟು ವಿಭಾಗದಲ್ಲಿ) ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಗೃಹರಕ್ಷಕ ದಳ ಇಲಾಖೆಯ ಜಿಲ್ಲಾ ಸಮಾದೇಶ್ಠ ಚನ್ನಾರಡ್ಡಿ ಬಸವರಾಜ ಗೊಳರಡ್ಡಿರವರು, ಅಡ್ಜುಟೆಂಟ್ ಕೆ.ಸಿ. ವಕ್ಕಳದ, ಜಿಲ್ಲಾ ಬೋಧಕ ಕಿರಣಕುಮಾರ ಕಟಗಿ, ಘಟಕಾಧಿಕಾರಿಗಳಾದ ಎಸ್.ಎಫ್. ದೊಡ್ಡಮನಿ, ಸಿ.ಜಿ. ಮುದಿಯಪ್ಪನವರ, ಆರ್.ಎಂ. ಹುಡೇದ, ಸಿಬ್ಬಂದಿಗಳಾದ ಬಿ.ಡಿ. ನಾಯಕ, ಬಿ.ಎಸ್. ಬಸವರಡ್ಡಿ ಮುಂತಾದವರಿದ್ದರು.



