2025ರ ಮಹಾಕುಂಭಮೇಳದಲ್ಲಿ ನೀಲಿ ಕಣ್ಣುಗಳಿಂದ ಇಡೀ ದೇಶದ ಗಮನ ಸೆಳೆದಿದ್ದ ಮೊನಾಲಿಸಾ ಭೋಸ್ಲೆ ಈಗ ಫುಲ್ ಫ್ಲೆಡ್ಜ್ ನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮೊನಾಲಿಸಾ ಮತ್ತು ಸಮರ್ಥ್ ಮೆಹ್ತಾ ಅಭಿನಯದ ‘ದಿಲ್ ಜಾನಿಯಾ’ ರೊಮ್ಯಾಂಟಿಕ್ ಆಲ್ಬಂ ಸಾಂಗ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ರೆಸ್ಪಾನ್ಸ್ ಸಿಕ್ಕಿದೆ.
ಹಾಡಿನಲ್ಲಿ ಸಮರ್ಥ್ ಮೆಹ್ತಾ ಜೊತೆ ಮೊನಾಲಿಸಾ ಡ್ಯಾನ್ಸ್ ಮಾಡಿದ್ದು, ಆಕೆಯ ನ್ಯಾಚುರಲ್ ಚಾರ್ಮ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡು ಹನಿಮನಿ ಪ್ರೊಡಕ್ಷನ್ ಹೌಸ್ ನಿರ್ಮಾಣದಲ್ಲಿ, ರಿಥಮ್ ಸಂಧ್ಯಾ ನಿರ್ದೇಶನದಲ್ಲಿ ಮೂಡಿಬಂದಿದೆ. ರಾಜಾ ಹರ್ಭಜನ್ ಸಿಂಗ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಗಗನ್ದೀಪ್ ಲಿರಿಕ್ಸ್ ನೀಡಿದ್ದಾರೆ. ‘ದಿಲ್ ಜಾನಿಯಾ’ ಹಾಡು ವೀನಸ್ ಓರಿಜಿನಲ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿದೆ.
ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ ಇಂದು ಪೂರ್ತಿ ದೇಶಕ್ಕೆ ಪರಿಚಿತ ಹೆಸರು. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪ್ರದೇಶದ ಯುವತಿ ಮೊನಾಲಿಸಾ, ತನ್ನ ವಿಭಿನ್ನ ನೀಲಿ ಕಣ್ಣುಗಳಿಂದ ವೈರಲ್ ಆದ ಬಳಿಕ ಜೀವನವೇ ಬದಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋ-ವೀಡಿಯೋಗಳು ಟ್ರೆಂಡ್ ಆದ ನಂತರ, ನಿರ್ದೇಶಕ ಸನೋಜ್ ಮಿಶ್ರಾ ಅವರು ‘ದಿ ಡೈರಿ ಆಫ್ ಮಣಿಪುರ’ ಸಿನಿಮಾದಲ್ಲಿ ಅವಕಾಶ ನೀಡಿದರು. ಕಳೆದ ಒಂದು ವರ್ಷದಿಂದ ಮೊನಾಲಿಸಾ ಈ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದು, ಇನ್ನೂ ಚಿತ್ರೀಕರಣ ಮುಂದುವರಿದಿದೆ. ಶೀಘ್ರದಲ್ಲೇ ಸಿನಿಮಾ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ, ಕುಂಭಮೇಳದ ಸ್ಟಾಲ್ನಿಂದ ಸಿನಿಮಾ ಸ್ಟಾರ್ ಆಗುವವರೆಗೆ ಮೊನಾಲಿಸಾದ ಜರ್ನಿ ಈಗ ಲಕ್ಷಾಂತರ ಯುವತಿಯರಿಗೆ ಇನ್ಸ್ಪಿರೇಷನ್ ಆಗಿದೆ.



