ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದ ಅರೋಪಿಯೋರ್ವನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಮೂಲದ ಯಕ್ಷಿತ್ ರಾಜ್ ಬಂಧಿತ ಆರೋಪಿ. ಬಂಧಿತನನ್ನು ಮೂಡಿಗೆರೆ ಪೊಲೀಸರು ಕಸ್ಟಡಿಗೆ ತೆಗೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಯು, ಶಾಸಕಿ ನಯನಾ ಮೋಟಮ್ಮ ಅವರ ವೈಯಕ್ತಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ಅವರ ಬಟ್ಟೆ ಮತ್ತು ವೈಯಕ್ತಿಕ ಜೀವನದ ಕುರಿತು ನಿರಂತರವಾಗಿ ಕಾಮೆಂಟ್ ಮಾಡಿದ್ದ. ಈ ಸಂಬಂಧ ಶಾಸಕಿಯ ಪಿಎ ಸಂಸುದ್ದೀನ್ ಕಳೆದ ಅಕ್ಟೋಬರ್ ತಿಂಗಳಲ್ಲೇ ದೂರು ದಾಖಿಸಿದ್ದರು.
ತನಿಖೆ ಚುರುಕು ಮಾಡಿದ್ದ ಪೋಲೀಸರು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



