ರಾಯಚೂರು: ಸಂಕ್ರಾಂತಿ ಹಬ್ಬದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿಯ ಸ್ಥಾನ ಬದಲಾವಣೆ ಕುರಿತು ಕೋಡಿ ಮಠದ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಕಾಗಿನೆಲೆ ಕನಕಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂಕ್ರಾಂತಿ, ಯುಗಾದಿ ಅಲ್ಲ, ಬಜೆಟ್ವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಜನರು ಸಂಕ್ರಾಂತಿ ಮತ್ತು ಯುಗಾದಿಯ ದಿನಗಳನ್ನು ಗಮನಿಸುತ್ತಾರೆ. ಈ ಸಂದರ್ಭದಲ್ಲಿ ಸಂಕ್ರಾಂತಿಯಲ್ಲಿ ಸೂರ್ಯನ ಸ್ಥಿತಿ, ಯುಗಾದಿಯಲ್ಲಿ ಚಂದ್ರನ ಸ್ಥಿತಿಯ ಆಧಾರದ ಮೇಲೆ ಜ್ಯೋತಿಷ್ಯ ಹೇಳಲಾಗುತ್ತದೆ.
“ಯುಗಾದಿ ಹಬ್ಬ ಮುಗಿಯುವವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಇರಲಿದ್ದಾರೆ. ಮುಂದಿನ ಅಂಶಗಳನ್ನು ಯುಗಾದಿ ಹಬ್ಬದ ನಂತರ ನೋಡಿ ತಿಳಿಸಲಾಗುತ್ತದೆ ಎಂದರು. ಇನ್ನೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಡದಲ್ಲಿದ್ದಾರೆ ಎಂಬ ಸಂಗತಿಗೂ ಸ್ಪಷ್ಟನೆ ನೀಡಿದ್ದಾರೆ. “ಆತ ಒಳ್ಳೆಯ ಕಾರ್ಯಕರ್ತ, ಸಂಘಟನೆಯ ಮನುಷ್ಯ, ಹೋರಾಟಗಾರ. ಆದರೆ ಇಲ್ಲಿ ಸಂಘಟನೆಯ ವಿಚಾರವಿಲ್ಲ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡ್ತಾರಾ ಇಲ್ಲವಾ, ಅನ್ನೋದನ್ನು ನೋಡಿಕೊಂಡು ಹೇಳುತ್ತೇನೆ” ಎಂದು ಅವರು ತಿಳಿಸಿದ್ದಾರೆ.



