ವಿಜಯಸಾಕ್ಷಿ ಸುದ್ದಿ, ಗದಗ:
ಕಂಠಮಟ ಸಾರಾಯಿ ಕುಡಿದು ಭರ್ಜರಿ ಚಿಕನ್ ಪಾರ್ಟಿ ಮಾಡಿ ಗೆಳೆಯನ್ನನ್ನು ಕೊಲೆಗೈದು ಹಳ್ಳದಲ್ಲಿ ಎಸೆದು ಹೋಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ನಡೆದಿದೆ.
ಕೊತಬಾಳ ಗ್ರಾಮದ ಸಿದ್ದಪ್ಪ ಪಾಗದ (48) ಎಂಬಾತನೇ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಮಹಾಂತೇಶ್ ಎಂಬಾತನೇ ಕೊಲೆ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ಸಿದ್ದಪ್ಪ ಪಾಗದ, ಕೊಲೆ ಆರೋಪಿ ಮಹಾಂತೇಶ್ ನ ಮನೆಯಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ.
ನಿನ್ನೆ ರಾತ್ರಿ ಕೊತಬಾಳ ಗ್ರಾಮದ ಹೊರವಲಯದ ಆರೋಪಿಯ ಜಮೀನಿಗೆ ಇಬ್ಬರು ಪಾರ್ಟಿ ಮಾಡಲು ತೆರಳಿದ್ದರು. ಮದ್ಯ ಹಾಗೂ ಚಿಕನ್ ಪಾರ್ಟಿ ಮಾಡಿದ ನಂತರ ಆರೋಪಿ ಮಹಾಂತೇಶ್ ಪಿಕಾಸಿಯಿಂದ ಸಿದ್ದಪ್ಪನಿಗೆ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಪಕ್ಕದ ಹಳ್ಳದಲ್ಲಿ ಶವ ತಂದು ಹೂತು ಹಾಕಿ ಪರಾರಿಯಾಗಿದ್ದ.

ಮಾಹಿತಿ ತಿಳಿದ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಭೇಟಿ ಕೊಲೆಗೆ ಕಾರಣ ಹಾಗೂ ಆರೋಪಿಯ ಬಗ್ಗೆ ಮಾಹಿತಿ ಪಡೆದರು.
ಆರೋಪಿ ಮಹಾಂತೇಶ್ ನನ್ನು ಪೊಲೀಸರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.