ವಿಜಯಸಾಕ್ಷಿ ಸುದ್ದಿ, ಗದಗ: ಸ್ನೇಹ ಮತ್ತು ಸೇವೆಯ ಉದ್ದೇಶದಿಂದ ಸ್ಥಾಪಿತಗೊಂಡ ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಸಂಸ್ಥೆಯ 102ನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರಕೃತಿಯ ಸೊಬಗಿನಲ್ಲಿ ಆಚರಿಸಿದರು.
ಕ್ಲಬ್ಬಿನ ಅಧ್ಯಕ್ಷರಾದ ಅಶ್ವಿನಿ ಜಗತಾಪ್ ಅವರು ಸೇವೆಯನ್ನು ಮೂಲ ಉದ್ದೇಶವಾಗಿರಿಸಿಕೊಂಡು ಸ್ಥಾಪಿಸಿದ ಇನ್ನರ್ ವ್ಹೀಲ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಪ್ರಕೃತಿಯ ಮಡಿಲಿನಲ್ಲಿರುವ ಯು.ಕೆ. ನೆಚರ್ಸ್ ಸ್ಟೇಯಲ್ಲಿ ಹಮ್ಮಿಕೊಂಡ ಕಾರಣ ಮತ್ತು ಕಾರ್ಯಗಳ ಬಗ್ಗೆ ಮಾತನಾಡಿದರು.
ಸಂಸ್ಥೆಯ ಹಿರಿಯರು ಮತ್ತು ಮಾಜಿ ಅಧ್ಯಕ್ಷರಾದ ಶ್ರೇಯಾ ಪವಾಡಶೆಟ್ಟರ್ ಮಾತನಾಡಿ, 1924ರ ಜನವರಿ 10ರಂದು ಮಾರ್ಗರೇಟ್ ಒಲಿವರ್ ಗೋಲ್ಡಿಂಗ್ ಅವರು ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಇನ್ನರ್ ವ್ಹೀಲ್ ಕ್ಲಬ್ ಸ್ಥಾಪಿಸಿದ ರೀತಿ, ಬೆಳೆದುಬಂದ ಹಾದಿಯನ್ನು ವಿವರಿಸಿದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಶಿವಲೀಲಾ ಅಕ್ಕಿ ನಿರೂಪಿಸಿದರು. ಇನ್ನರ್ ವ್ಹೀಲ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಪ್ರವಾಸವು ಆಟ, ಸಂಗೀತ, ನೃತ್ಯದೊಂದಿಗೆ ಆರಂಭವಾಗಿ ಮುಸ್ಸಂಜೆಯ ತಂಪಿನಲ್ಲಿಯೂ ಬೆಚ್ಚನೆಯ ಅನುಭವವನ್ನು ನೀಡಿದರೆ, ನಸುಕಿನ ಪಕ್ಷಿಗಳ ಚಿಲಿಪಿಲಿ ಹಾಗೂ ನೀರಿನ ಕಲರವದ ನಡುವಿನ ಪಯಣ ಪ್ರವಾಸಕ್ಕೆ ಶೋಭೆಯನ್ನು ತಂದುಕೊಟ್ಟಿತು.
ಮಾಜಿ ಅಧ್ಯಕ್ಷರುಗಳಾದ ಆಶಾ ಹುಕ್ಕೇರಿ, ಆಶಾ ಪಟ್ಟಣಶೆಟ್ಟಿ, ಸುಲೋಚನಾ ಐಹೊಳ್ಳಿ, ಖಜಾಂಚಿ ಪುಷ್ಪಾ ಭಂಡಾರಿ, ಸಂಪಾದಕರಾದ ವೀಣಾ ಕಾವೇರಿ, ಸಿಪಿಸಿಸಿ ಮೀನಾಕ್ಷಿ ಕೊರವಣ್ಣನವರ್, ಕೋ-ಸಿಪಿಸಿಸಿ ಶಿಲ್ಪಾ ಅಕ್ಕಿ, ಸದಸ್ಯರುಗಳಾದ ಸುಶೀಲಾ ಕೋಟಿ, ಉಮಾ ಮುನವಳ್ಳಿ, ಉಮಾ ಕವಳಿಕಾಯಿ, ಸಂಧ್ಯಾ ಕೋಟಿ, ಸುನಂದಾ ಭೂಮರೆಡ್ಡಿ, ಸುವರ್ಣಾ ಮದರಿಮಠ, ಪ್ರತಿಭಾ ಭದ್ರಶೆಟ್ಟಿ, ಪವಿತ್ರಾ ಬಿರಾದರ್, ಗೀತಾ ನಾಲ್ವಾಡ, ದೀಪಾ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.



