HomeKoppalಜನಪರ ಸಿಎಂ ಜನರ ಸಮಸ್ಯೆ ಪರಿಹರಿಸಲಿ: ಸಾಹಿತಿ ಪ್ರೊ. ಕೆ.ಎಸ್. ಭಗವಾನ್

ಜನಪರ ಸಿಎಂ ಜನರ ಸಮಸ್ಯೆ ಪರಿಹರಿಸಲಿ: ಸಾಹಿತಿ ಪ್ರೊ. ಕೆ.ಎಸ್. ಭಗವಾನ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಾನು ಹಳ್ಳಿಯವನು. ರೈತರ ಎಲ್ಲ ಕೆಲಸ ಮಾಡಿದವನು. ರೈತರು ಬೂದಿ, ಹೊಗೆಯಲ್ಲಿ ಹೇಗೆ ಬದುಕಬೇಕು? ಇಡೀ ರಾಜ್ಯದ ಜನರಿಗೆ ವಿಷಯ ತಿಳಿಸುವಂತೆ ಪತ್ರಿಕಾ ಹಾಗೂ ಟಿವಿ ಮಾಧ್ಯಮದವರು ಪೂರ್ಣ ಪ್ರಯತ್ನ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಕೋರಿದರು.

ಅವರು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ನಗರಸಭೆ ಎದುರು ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ್ ಸುಮಿ, ಎಕ್ಸ್ ಇಂಡಿಯಾ, ತನುಷ್, ದೃವದೇಶ → ಧ್ರುವದೇಶ ಸೇರಿದಂತೆ ಅನೇಕ ಪರಿಸರ ಮಾರಕ ಕಾರ್ಖಾನೆ ವಿರೋಧಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ 75ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಇರುವ ಕಾರ್ಖಾನೆಗಳ ಸಂಕಷ್ಟವನ್ನೇ ತಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನಷ್ಟು ಬಂದರೆ ಇಲ್ಲಿನ ಗತಿಯೇನು ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಸಂಪರ್ಕದ ಕೊರತೆ ಇದೆ, ಇಲ್ಲಿ ನಡೆಯುವ ಸಮಸ್ಯೆ ಬೆಂಗಳೂರು ತಲುಪವುದೇ → ತಲುಪುವುದೇ ಇಲ್ಲ. ಆದ್ದರಿಂದ ಹೋರಾಟಗಾರರ ನಿಯೋಗದ ಜೊತೆಗೆ ವಿಧಾನಸೌಧಕ್ಕೆ ಹೋರಾಟವನ್ನು ತಲುಪಿಸೋಣ ಎಂದರು.

ಹಿರಿಯ ವಕೀಲ ರಾಜು ಬಾಕಳೆ ಮಾತನಾಡಿ, ಕಾರ್ಖಾನೆ ಆರಂಭದ ಹಂತದಲ್ಲೇ ನ್ಯಾಯಾಲಯ ಮತ್ತು ರೈತರ ಬಲಪ್ರಯೋಗದಿಂದಲೂ ಸಹ ಅಂದು ಭೂಮಿ ಕಸಿದುಕೊಳ್ಳುವದನ್ನು → ಕಸಿದುಕೊಳ್ಳುವುದನ್ನು ತಡೆಯಲು ಪ್ರಯತ್ನ ಮಾಡಿ, ದಶಕಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ ಸೋತಿದ್ದೇವೆ. ಆದರೆ ಈಗ ಜನಸಂಗ್ರಾಮದ ಮೂಲಕ ಗೆಲವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು.

ರೈತ ಮಹಿಳೆ ಗಿರಿಯಮ್ಮ ಕುಣಿಕೇರಿ ಮತ್ತು ಹಾಲವರ್ತಿಯ ಕೃಷಿಕ ಮಾರ್ಕಂಡಯ್ಯ ಹಿರೇಮಠ ಮಾತನಾಡಿ, ಬದುಕಿ ಬಾಳಿದ ಊರು ಬಿಡುವ ಮನಸ್ಸಿಲ್ಲ, ಇದೇ ಕಾರಣಕ್ಕೆ ಇಲ್ಲಿನ ಹಿರಿಯರ ಆರೋಗ್ಯ ಕೆಟ್ಟಿದೆ, ಮಕ್ಕಳು ಸದಾ ಕೆಮ್ಮು ಎನ್ನುತ್ತಿದ್ದರೆ, ಹಲವರಿಗೆ ಕ್ಯಾನ್ಸರ್ ಇದೆ ಎಂದು ಭಾವುಕರಾದರು. ದದೇಗಲ್ ಸದ್ಗುರು ಸಿದ್ಧಾರೂಢ ಮಠದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಧರಣಿಯಲ್ಲಿ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಎಚ್.ಎಸ್. ಪಾಟೀಲ್, ಎ.ಎಂ. ಮದರಿ, ಡಿ.ಎಚ್. ಪೂಜಾರ, ರಾಜು ಬಾಕಳೆ, ನಜೀರಸಾಬ್ ಮೂಲಿಮನಿ, ಭೀಮಸೇನ ಕಲಕೇರಿ, ಜ್ಯೋತಿ ಎಂ.ಗೊAಡಬಾಳ → ಗೊಂಡಬಾಳ, ಸಾವಿತ್ರಿ ಮುಜುಮದಾರ, ಶಾಯೀದ್ ತಹಸೀಲ್ದಾರ, ದಾನಪ್ಪ ಕವಲೂರು, ಅಲೀಮುದ್ದಿನ್, ಸುರೇಶ ಕುಂಬಾರ, ಶುಕರಾಜ ತಾಳಕೇರಿ, ಮಂಜು ಹಾಲವರ್ತಿ, ಎಚ್.ಬಿ. ಸರೋಜಮ್ಮ, ಎಸ್.ಬಿ. ರಾಜೂರು, ಶಂಭುಲಿAಗಪ್ಪ → ಶಂಭುಲಿಂಗಪ್ಪ ಹರಗೇರಿ, ಎಲ್.ಎಫ್. ಪಾಟೀಲ್, ಮೂಕಪ್ಪ ಮೇಸ್ತಿç → ಮೇಸ್ತಿ ಬಸಾಪುರ, ಶರಣು ಗಡ್ಡಿ, ರವಿ ಕಾಂತನವರ, ಗವಿಸಿದ್ದಪ್ಪ ಹಲಿಗಿ, ಜಿ.ಎಸ್. ಕಡೇಮನಿ, ಮಹಾದೇವಪ್ಪ ಮಾವಿನಮಡು, ಬಸವರಾಜ ನರೇಗಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಂಗಳೇಶ ರಾಠೋಡ, ಮಂಜುನಾಥ ಕವಲೂರು, ಸಿ.ಬಿ. ಪಾಟೀಲ್, ಸುಂಕಪ್ಪ ಮೀಸಿ, ಮಲ್ಲಪ್ಪ ಮಾ.ಪಾ, ಗಣೇಶ ವಿಶ್ವಕರ್ಮ, ಸುರೇಶ ಪೂಜಾರ, ಸದಾಶಿವ ಪಾಟೀಲ್ ಮುಂತಾದವರಿದ್ದರು.

ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಹೆಚ್. ಪೂಜಾರ ಮಾತನಾಡಿ, ಶಾಸಕರು ಮೂರು ತಿಂಗಳಿAದ → ತಿಂಗಳಿನಿಂದ ನಡೆಯುತ್ತಿರುವ ಹೋರಾಟದ ಕಡೆಗೆ ಸೌಜನ್ಯದ ಭೇಟಿ ಸಹ ಮಾಡಿಲ್ಲ. ಕ್ಷೇತ್ರದ ಜನರ ಜೀವನ, ಉಸಿರು, ಬದುಕು ಮತ್ತು ಕೃಷಿ ಮುಖ್ಯ ಎನ್ನಬೇಕೇ ಹೊರತು ಫಲಾಯನವಾದ → ಫಲಾಯನವಾದ ಮಾಡಬಾರದು. ಹೋರಾಟವನ್ನು ಅತೀ ಶೀಘ್ರದಲ್ಲೇ ರಾಜಕ್ಕೆ → ರಾಜ್ಯಕ್ಕೆ ವಿಸ್ತರಿಸಲಾಗುವದು → ವಿಸ್ತರಿಸಲಾಗುವುದು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!