ಬೆಂಗಳೂರು: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.
ಸುಗ್ಗಿಯ ಸಂಭ್ರಮದಲ್ಲಿ ರಾಜ್ಯದ ಗ್ರಾಮೀಣ ಭಾಗಗಳಷ್ಟೇ ಅಲ್ಲದೆ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಹಬ್ಬದ ಉತ್ಸಾಹ ಜೋರಾಗಿದೆ. ಸಂಕ್ರಾಂತಿಗೆ ಬೇಕಾದ ಹೂ, ಹಣ್ಣು, ಕಬ್ಬು, ತರಕಾರಿ ಖರೀದಿಗೆ ಜನರು ಕೆ.ಆರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ದಿನವಾಗಿ ಆಚರಿಸುವ ಸಂಕ್ರಾಂತಿ ಹಬ್ಬಕ್ಕೆ ಎಳ್ಳು–ಬೆಲ್ಲ ಹಂಚಿ ಸಂತೋಷ ಪಡುತ್ತಾರೆ. ಅದಕ್ಕಾಗಿ ರೆಡಿಮೇಡ್ ಎಳ್ಳು–ಬೆಲ್ಲಕ್ಕೂ ಭರ್ಜರಿ ಬೇಡಿಕೆ ಕಂಡುಬಂದಿದೆ. ಆದರೆ ಪ್ರತಿವರ್ಷದಂತೆ ಈ ಬಾರಿ ಕೂಡ ಹೂವಿನ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಬರೆ ಎಳೆದಿದೆ.
ಹೂವಿನ ದರ (ಕೆ.ಆರ್ ಮಾರುಕಟ್ಟೆ):
ಕನಕಾಂಬರ: ₹700 – ₹800
ಕಾಕಡ: ₹500 – ₹600
ಗುಲಾಬಿ: ₹80
ಸೇವಂತಿ: ₹70
ಹಣ್ಣು ಹಾಗೂ ಇತರೆ ವಸ್ತುಗಳ ಬೆಲೆ:
ಕಬ್ಬು (ಜೋಡಿ): ₹150 – ₹250
ಸೇಬು: ₹160
ದಾಳಿಂಬೆ: ₹140
ಅವರೆಕಾಯಿ: ₹80 – ₹100
ಹಬ್ಬದ ಸಂಭ್ರಮದ ನಡುವೆ ಬೆಲೆ ಏರಿಕೆಯಿಂದ ಜನರು ಸ್ವಲ್ಪ ಅಸಮಾಧಾನಗೊಂಡರೂ, ಸಂಕ್ರಾಂತಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂಪ್ರದಾಯದಂತೆ ಆಚರಿಸಲು ಜನರು ಮುಂದಾಗಿದ್ದಾರೆ.



