ಗದಗ: ನಗರದ ಮುಳಗುಂದ ನಾಕಾದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ನಡೆಸಿದ ಹೈಡ್ರಾಮಾ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗದಗದಿಂದ ಅಂತೂರು–ಬೆಂತೂರು ಗ್ರಾಮಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಅನ್ನು ಅಡ್ಡಗಟ್ಟಿ, ಬಸ್ ಮುಂದೆ ಮಲಗಿ, ಬಸ್ ಮುಂದಕ್ಕೆ ಸಾಗದಂತೆ ಅಡ್ಡಿಪಡಿಸಿದ್ದಾನೆ.
ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕ, ಬಸ್‌ನಲ್ಲಿ 53 ಸೀಟ್‌ಗಳನ್ನು ಹಾಕಿರುವುದೇ ಸಮಸ್ಯೆ ಎಂದು ಕಾರಣ ಹೇಳಿ, ಚಾಲಕ ಮತ್ತು ನಿರ್ವಾಹಕರೊಂದಿಗೆ ಜಗಳ ಆರಂಭಿಸಿದ್ದಾನೆ. “ಬಸ್ ಮುಂದಕ್ಕೆ ಬಿಡೋದಿಲ್ಲ”, “ನನ್ನ ಮೇಲೆ ಬಸ್ ಹತ್ತಿಸಿಕೊಂಡು ಹೋದ್ರು ಪರವಾಗಿಲ್ಲ” ಎಂದು ಕೂಗಾಡುತ್ತಾ ಸಾರ್ವಜನಿಕರ ಗಮನ ಸೆಳೆದಿದ್ದಾನೆ.
ಈ ಹೈಡ್ರಾಮಾದಿಂದ ಬಸ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಬದಿಯಲ್ಲಿ ನಿಂತಿತ್ತು. ಪ್ರಯಾಣಿಕರು ಅಸಹಾಯಕ ಸ್ಥಿತಿಗೆ ತಲುಪಿದ್ದು, ಚಾಲಕ ಮತ್ತು ಕಂಡಕ್ಟರ್ ಕುಡುಕನ ವರ್ತನೆಗೆ ಸಂಪೂರ್ಣ ಸುಸ್ತಾಗಿ ಹೋಗಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಸಾರ್ವಜನಿಕರು ಇಂತಹ ವರ್ತನೆಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



