ಬೆಂಗಳೂರು/ಮಂಡ್ಯ: ಮಳವಳ್ಳಿಯ ಹಳ್ಳಿಹೈದ… ಇಂದು ಇಡೀ ಕರುನಾಡದ ಹೆಮ್ಮೆ. ಗಿಲ್ಲಿ ನಟ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿ ದೊಡ್ಮನೆ ದೊರೆಯಾಗಿದ್ದಾರೆ. ಎಲ್ಲೆಲ್ಲೂ ಒಂದೇ ಸೌಂಡ್ – “ಗಿಲ್ಲಿ… ಗಿಲ್ಲಿ… ಗಿಲ್ಲಿ!”
ಬಿಗ್ ಬಾಸ್ ಆರಂಭವಾದ ದಿನದಿಂದಲೇ ಜನ ಮನಸ್ಸಿನಲ್ಲಿ ಒಂದು ಮಾತು ಓಡುತ್ತಿತ್ತು – “ಈ ಸೀಸನ್ ವಿನ್ನರ್ ಗಿಲ್ಲಿಯೇ.” ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯ ಹವಾ, ಸೋಷಿಯಲ್ ಮೀಡಿಯಾದಲ್ಲೂ ಗಿಲ್ಲಿಯ ಕ್ರೇಜ್. ಕೊನೆಗೂ ಜನರ ನಿರೀಕ್ಷೆ ನಿಜವಾಗಿದೆ.
ಗಿಲ್ಲಿಯ ಗೆಲುವಿನ ಹಿಂದಿನ ದೊಡ್ಡ ಕಾರಣ ಅವರ ವ್ಯಕ್ತಿತ್ವ. ಸಿಲ್ಲಿ ಜೋಕ್ಸ್ ಇಲ್ಲ, ಅಶ್ಲೀಲತೆ ಇಲ್ಲ, ಡಬಲ್ ಮೀನಿಂಗ್ ಇಲ್ಲ – ಶುದ್ಧ ಫ್ಯಾಮಿಲಿ ಕಾಮಿಡಿ. ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಒಟ್ಟಿಗೆ ಕೂತು ನಗುವಂತೆ ಮಾಡಿದ ಅಪರೂಪದ ಸ್ಪರ್ಧಿ ಗಿಲ್ಲಿ.
ಗಿಲ್ಲಿ ವಿನ್ನರ್ ಆಗ್ತಿದ್ದಂತೆ ರಾಜ್ಯಾದ್ಯಂತ ಸಂಭ್ರಮದ ಸಿಡಿಲು. ಪಟಾಕಿ, ನೃತ್ಯ, ಶಿಳ್ಳೆ, ಚಪ್ಪಾಳೆ – ಎಲ್ಲೆಲ್ಲೂ ಹಬ್ಬದ ವಾತಾವರಣ. ಹುಟ್ಟೂರು ದಡದಪುರ ಗ್ರಾಮದಲ್ಲಿ ಕಟೌಟ್‌ಗಳು ರಾರಾಜಿಸಿದವು. ಗ್ರಾಮಸ್ಥರು “ನಮ್ಮ ಗಿಲ್ಲಿ ನಮ್ಮ ಹೆಮ್ಮೆ” ಎಂದು ಘೋಷಿಸಿದರು.
ಗಿಲ್ಲಿಗೆ ಭವ್ಯ ಸ್ವಾಗತಕ್ಕೆ ಊರು ಸಜ್ಜಾಗಿದೆ. ಮದ್ದೂರಿನಿಂದ ದಡದಪುರವರೆಗೆ ಎತ್ತಿನಗಾಡಿ ಮೆರವಣಿಗೆ, ವಿಶೇಷ ಸಂಭ್ರಮ, ಸಿಡಿ ಹಬ್ಬ – ಎಲ್ಲವೂ ಗಿಲ್ಲಿಗಾಗಿ. ಈ ಬಾರಿ ಬಿಗ್ ಬಾಸ್ ಕ್ರೇಜ್ ಹೆಚ್ಚಾಗಲು ಪ್ರಮುಖ ಕಾರಣವೇ ಗಿಲ್ಲಿ ಎನ್ನುವುದರಲ್ಲಿ ಎರಡು ಮಾತಿಲ್ಲ.
“ಡಮಾಲ್ ಡಿಮಿಲ್ ಡಕ್ಕ… ಗಿಲ್ಲಿ ಗೆಲ್ಲೋದು ಪಕ್ಕಾ” ಎಂದು ಗಿಲ್ಲಿ ಹೇಳುತ್ತಿದ್ದ ಮಾತು ಇದೀಗ ನಿಜವಾಗಿದೆ. ಅತೀ ಹೆಚ್ಚು ಮತಗಳೊಂದಿಗೆ ಗಿಲ್ಲಿ ಟ್ರೋಫಿ ಎತ್ತಿದ್ದಾರೆ.
ಗಿಲ್ಲಿಗೆ ದೊರೆತ ಬಹುಮಾನಗಳು:
🏆 ನಗದು ಬಹುಮಾನ – ₹50 ಲಕ್ಷ
🚗 ಮಾರುತಿ ಸುಜುಕಿ ಕಾರು
🎁 ಕಿಚ್ಚ ಸುದೀಪ್ ಕಡೆಯಿಂದ ವಿಶೇಷವಾಗಿ ₹10 ಲಕ್ಷ
ರನ್ನರ್ ಅಪ್ ಬಹುಮಾನ:
▪️ ರಕ್ಷಿತಾ ಶೆಟ್ಟಿ – ₹20 ಲಕ್ಷ
▪️ ಅಶ್ವಿನಿ ಗೌಡ – ₹14 ಲಕ್ಷ
▪️ ಕಾವ್ಯಾ – ₹10 ಲಕ್ಷ
▪️ ಮ್ಯೂಟೆಂಟ್ ರಘು – ₹3.5 ಲಕ್ಷ
ಒಟ್ಟಾರೆ, ಈ ಬಾರಿ ಬಿಗ್ ಬಾಸ್ ಗೆದ್ದದ್ದು ಒಬ್ಬ ಸ್ಪರ್ಧಿ ಮಾತ್ರವಲ್ಲ… ಗೆದ್ದದ್ದು ಜನರ ಮನಸ್ಸು, ಗೆದ್ದದ್ದು ಸರಳತೆ, ಗೆದ್ದದ್ದು ವ್ಯಕ್ತಿತ್ವ.



