ಬೆಂಗಳೂರು: ಗದಗ ಜಿಲ್ಲೆಯ ಯುವ ಸಂಘಟನಾ ಚತುರ ಹಾಗೂ ಗದಗ ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ. ಬಸವರಾಜ ಬಳ್ಳಾರಿ ಅವರ ನೇಮಕ ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಜಿಲ್ಲೆಯ ನೌಕರ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಡಾ. ಬಸವರಾಜ ಬಳ್ಳಾರಿ ಅವರು ಕಳೆದ ಹಲವು ವರ್ಷಗಳಿಂದ ಸರ್ಕಾರಿ ನೌಕರರ ಹಕ್ಕುಗಳು, ಸೇವಾ ಭದ್ರತೆ, ವೇತನ, ವರ್ಗಾವಣೆ ಹಾಗೂ ಕಲ್ಯಾಣ ಯೋಜನೆಗಳಿಗಾಗಿ ರಾಜ್ಯ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಜೊತೆಗೆ ಶ್ರಮಿಸಿದ್ದಾರೆ.
ಹೀಗಾಗಿ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನದ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತದೆ.
ಗದಗ ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಬಸವರಾಜ್ ಬಳ್ಳಾರಿ ಅವರು, ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ, ನೌಕರರ ಕಾರ್ಯಾಗಾರ, ರಾಜ್ಯವೇ ತಿರುಗಿ ನೋಡುವಂತೆ ಜಿಲ್ಲಾ ಮಟ್ಟದ ಕ್ರೀಡಾಕೂಟ, ಸಾಂಸ್ಕೃತಿಕ ಹಬ್ಬ ಹಾಗೂ ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡುವಲ್ಲಿ ಸೇವಕನಂತೆ ಕಾರ್ಯನಿರ್ವಹಿಸುವ ವೈಖರಿ ಆಧರಿಸಿ ಈ ಸ್ಥಾನ ಕೊಡಲಾಗಿದೆ ಎನ್ನಲಾಗುತ್ತದೆ.
ಈ ಐತಿಹಾಸಿಕ ನೇಮಕಕ್ಕೆ ಗದಗ ಜಿಲ್ಲೆಯ ಸಮಸ್ತ ಸರ್ಕಾರಿ ನೌಕರರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಗದಗ ಜಿಲ್ಲಾ ಶಾಖೆ ಅಭಿನಂದನೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಎನ್. ಲಿಂಗದಾಳ, ಖಜಾಂಚಿ ಮಹಂತೇಶ ನಿಟ್ಟಾಲಿ, ಅಜಯಕುಮಾರ ಕಲಾಲ, ದೇವೇಂದ್ರಪ್ಪ ತಳವಾರ, ರಾಜು ಕೊಂಟಿಗೂಣ್ಣವರ, ಶ್ರೀಧರ ಚಿನಗುಂಡಿ, ಶರಣಯ್ಯ ಪಾರ್ವತಿಮಠ, ಮುತ್ತುರಾಜ ಮಲಕಶೆಟ್ಟಿ, ರಾಜಕುಮಾರ್ ಸೊಪ್ಪಡ್ಲ, ಸುರೇಶ ಹುಚ್ಚಣ್ಣವರ, ಶರಣು ಸಂಗಳದ, ದೇವಪ್ಪ ದುರಗಣ್ಣವರ, ವಾಯ್.ಎನ್. ಕಡೆಮನಿ, ಶ್ರೀಮತಿ ಸರೋಜಾ ಕಟ್ಟಿಮನಿ, ಬಿ.ಸಿ. ಹಿರೇಹಾಳ, ಮಂಜುನಾಥ ಲಿಂಗದಾಳ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಈ ನೇಮಕದಿಂದ ರಾಜ್ಯ ಮಟ್ಟದಲ್ಲಿ ಗದಗ ಜಿಲ್ಲೆಯ ಧ್ವನಿ ಇನ್ನಷ್ಟು ಬಲಗೊಳ್ಳಲಿದ್ದು, ಜಿಲ್ಲೆಯ ನೌಕರರ ಸಮಸ್ಯೆಗಳು ಪರಿಣಾಮಕಾರಿಯಾಗಿ ಸರ್ಕಾರದ ಗಮನಕ್ಕೆ ಬರಲಿವೆ ಎಂಬ ವಿಶ್ವಾಸವನ್ನು ಸಂಘದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ನನ್ನ ಮೇಲೆ ಬಲವಾದ ನಂಬಿಕೆ ಇಟ್ಟು, ಮಹತ್ವದ ಹುದ್ದೆ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ, ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಸಂಘ ಹಾಗೂ ನೌಕರರ ಹಿತಾಸಕ್ತಿಗಾಗಿ ಹೋರಾಟ ಮಾಡಲಾಗುವುದು.
-ಡಾ. ಬಸವರಾಜ ಬಳ್ಳಾರಿ, ನೂತನ ರಾಜ್ಯ ಉಪಾಧ್ಯಕ್ಷರು ಹಾಗೂ ಗದಗ ಜಿಲ್ಲಾ ಅಧ್ಯಕ್ಷರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ.



