ಚಿತ್ರದುರ್ಗ:ಶಬರಿಮಲೆಯಲ್ಲಿಹಾರಿಬಿಟ್ಟ ಪಾರಿವಾಳವೊಂದು ಸುಮಾರು900 ಕಿಲೋಮೀಟರ್ ದೂರ ಕ್ರಮಿಸಿ, 21 ದಿನಗಳ ಬಳಿಕ ಮರಳಿ ತನ್ನ ಗೂಡಿಗೆ ಸೇರಿರುವ ಅಚ್ಚರಿಯ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ.
ಈ ಗ್ರಾಮದ ರಾಜು ಎಂಬವರು ಸಾಕಿದ್ದ ‘ಮದಕರಿ’ ಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳಿದ್ದ ಮಾಲಾಧಾರಿಗೆ ನೀಡಿದ್ದರು. ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಡುವಂತೆ ಸೂಚಿಸಿದ್ದರು. ಅದರಂತೆ, ಡಿಸೆಂಬರ್ 31ರಂದು ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಡಲಾಗಿದ್ದು, ಜನವರಿ 21ರಂದು ಅದು ಮರಳಿ ತಳವಾರಹಟ್ಟಿಯಲ್ಲಿರುವ ತನ್ನ ಗೂಡಿಗೆ ಸೇರಿದೆ.
ಸುಮಾರು 900 ಕಿಲೋಮೀಟರ್ ದೂರವನ್ನು ಕ್ರಮಿಸಿ 21 ದಿನಗಳ ಬಳಿಕ ಮರಳಿ ಗೂಡಿಗೆ ಸೇರಿರುವ ಈ ಪಾರಿವಾಳದ ದಿಕ್ಕು ಪತ್ತೆ ಸಾಮರ್ಥ್ಯ, ತೀಕ್ಷ್ಣ ದೃಷ್ಟಿ ಮತ್ತು ನೆನಪಿನ ಶಕ್ತಿ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.



