ವಿಜಯಸಾಕ್ಷಿ ಸುದ್ದಿ, ಗದಗ: ಭಾರತವು ಹಬ್ಬ-ಹರಿದಿನಗಳ ತವರೂರು. ಈ ನಾಡಿನಲ್ಲಿ ಯಾವುದೇ ಹಬ್ಬವಿರಲಿ ಅದು ತನ್ನ ವಿಶೇಷತೆ ಹೊಂದಿರುವಂತೆ ಮಕರ ಸಂಕ್ರಾಂತಿ ಕೂಡ ವಿಶಿಷ್ಟ ಹಬ್ಬವಾಗಿದೆ. ನಾವೆಲ್ಲರೂ ಒಂದೇ ಎಂದು ಹೇಳುವುದು ಸಕಲರಿಗೂ ಲೇಸನೆ ಬಯಸುವುದು ನಮ್ಮ ಸಂಸ್ಕೃತಿಯಾಗಿದೆ. ಸಂಕ್ರಾಂತಿಯಂದು ಪುಣ್ಯ ಕ್ಷೇತ್ರಗಳಲ್ಲಿ ಪುಣ್ಯ ಸ್ನಾನ ಮಾಡುವುದು, ಹೊಸ ಬಟ್ಟೆ ಧರಿಸುವುದು ನಮ್ಮಲ್ಲಿ ಸಂಪ್ರದಾಯವಾಗಿ ಬೆಳೆದು ಬಂದಿದೆ. ಹೀಗಾಗಿ ಮಕರ-ಸಂಕ್ರಾಂತಿಯು ಸಮಾನತೆ, ಸಂಸ್ಕೃತಿ, ಸಂಪ್ರದಾಯಗಳ ಸಂಗಮವಾಗಿದೆ ಎಂದು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಅಭಿಪ್ರಾಯಪಟ್ಟರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಗದಗ ಇವರು ಸಿದ್ಧಲಿಂಗ ನಗರದಲ್ಲಿನ ಬಸವಪ್ರಭೆ ಕ್ಯಾಂಪಸ್‌ನಲ್ಲಿ ನಡೆಸಿದ `ಸಂಕ್ರಾಂತಿ-ಸಂಭ್ರಮ-2026’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶೇಷ ಆಮಂತ್ರಿತರಾಗಿ ಆಗಮಿಸಿದ ಕುರ್ತಕೋಟಿ ಶ್ರದ್ಧಾ ಜ್ಞಾನ ವಿಕಾಸ ಕೇಂದ್ರದ ತರಬೇತುದಾರರಾದ ಅನಿತಾ ಹೆಬಸೂರಮಠ ಮಾತನಾಡಿ, ಮಹಿಳೆಯರಾದವರು ಕೇವಲ ಹಬ್ಬಗಳನ್ನು ಸಂಭ್ರಮಿಸಿದರೆ ಸಾಲದು, ತಮ್ಮಲ್ಲಿ ಕಲಾ-ಕೌಶಲ್ಯಗಳನ್ನು ಬೆಳೆಸಿಕೊಂಡು ಅವಕಾಶ ದೊರೆತಾಗ ಪ್ರದರ್ಶಿಸಿ ಇತರರಿಗೆ ಮಾದರಿಯಾಗಬೇಕೆಂದರು.
ಕಾರ್ಯಕ್ರಮದಲ್ಲಿ ಲಲಿತಾ ಕಡಗದ, ಗಂಗಾ ಹುಚ್ಚಣ್ಣವರ, ಅಂಬಿಕಾ ರೂಡಗಿ, ಸುಮಾ ಸುರೇಬಾನ, ಜಯಲಕ್ಷ್ಮೀ ಸಜ್ಜನರ, ರೇಖಾ ಗಾಣಿಗೇರ, ಪ್ರಭಾವತಿ ಕುಲಕರ್ಣಿ, ಶೋಭಾ ಭಾಂಡಗೆ, ಕಸ್ತೂರಿ ಮರಿಗೌಡ್ರ, ಅನ್ನಪೂರ್ಣ ಅಸೂಟಿ, ಪುಷ್ಪಾ ಹಿರೇಮಠ, ಮಹಾದೇವಿ ಚರಂತಿಮಠ, ಶಾಂತಾ ಮುಂದಿನಮನಿ, ವೀಣಾ ಅಕ್ಕಿ, ಗಿರಿಜಾ ಅಂಗಡಿ, ಶಕುಂತಲಾ ಬ್ಯಾಳಿ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ವಿಜಯಾ ಚನ್ನಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮಕರ ಸಂಕ್ರಾಂತಿ ಪ್ರಯುಕ್ತ ನಡೆಸಿದ ಮನೋಲ್ಲಾಸ ಕ್ರೀಡೆಗಳಾದ ಬಾಹ್ಯಾಂತರಿಕ ಶಕ್ತಿ ಪ್ರದರ್ಶನ ಸ್ಪರ್ಧೆಯಲ್ಲಿ ಅರುಣಾ ಇಂಗಳಳ್ಳಿ-ಪ್ರಥಮ, ಜಯಶ್ರೀ ವಸ್ತ್ರದ-ದ್ವಿತೀಯ, ಸಂಗೀತಾ ನಾಕೋಡ-ತೃತೀಯ ಸ್ಥಾನ ಪಡೆದರು. ಜಾಗೃತ ಜಾಣ್ಮೆ ಸ್ಪರ್ಧೆಯಲ್ಲಿ ವಿಜಯಲಕ್ಷ್ಮೀ ಮೇಕಳಿ-ಪ್ರಥಮ, ಅರುಣಾ ಇಂಗಳಳ್ಳಿ-ದ್ವಿತೀಯ, ಗೌರಿ ಜಿರಂಕಳಿ-ತೃತೀಯ ಸ್ಥಾನ ಪಡೆದರು. ಯೋಗಾಸನದ ಚಿತ್ರ ನೋಡಿ ಆಸನದ ಹೆಸರು ಹೇಳುವ ಸ್ಪರ್ಧೆಯಲ್ಲಿ ಜಯಶ್ರೀ ಡಾವಣಗೇರಿ-ಪ್ರಥಮ, ವೀಣಾ ಮಾಲಿಪಾಟೀಲ-ದ್ವಿತೀಯ, ಗೌರಿ ಜಿರಂಕಳಿ-ತೃತೀಯ ಸ್ಥಾನ ಪಡೆದರು.



