ದಾವಣಗೆರೆ:- ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣ್ತಾರೆ ಎಂದು ಹೇಳುವ ಮೂಲಕ 2028 ಕ್ಕೆ ನಾನೇ ಸಿಎಂ ಆಗ್ತೀನಿ ಎಂಬ ಹೆಚ್ಡಿಕೆ ಹೇಳಿಕೆಗೆ ಜಮೀರ್ ಅಹಮದ್ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಎಲ್ಲರೂ ರಾತ್ರಿ ಕನಸು ಕಂಡ್ರೆ ಕುಮಾರಸ್ವಾಮಿ ಹಗಲುಗನಸು ಕಾಣುತ್ತಾರೆ. 2013, 2019 ಹಾಗೂ 2023 ರಲ್ಲಿ ನಾವೇ ಬರುತ್ತೇವೆ ಅಂದ್ರು ಬರಲಿಲ್ಲ. ಜೆಡಿಎಸ್ನಲ್ಲಿ ಸಿದರಾಮಯ್ಯ ಇದ್ದಾಗ 59 ಸೀಟ್ ಗೆದ್ದಿದ್ದರು. ಅದನ್ನು ಕೂಡ ಕುಮಾರಸ್ವಾಮಿ ರೀಚ್ ಆಗಲಿಲ್ಲ. 2023ರ ಚುನಾವಣೆಯಲ್ಲಿ 19ಕ್ಕೆ ಬಂದ್ರು, ಅವರು ಸಿಎಂ ಆಗುವ ಹಗಲುಗನಸು ಕಾಣುತ್ತಾರೆ.
ದೇವೇಗೌಡ್ರು ನೂರು ವರ್ಷ ಅರೋಗ್ಯವಾಗಿ ಇರಲಿ. ನಾನು ಈಗ ಕಾಂಗ್ರೆಸ್ನಲ್ಲಿ ಇರಬಹುದು, ಆದರೆ ಅವರು ನನ್ನ ರಾಜಕೀಯ ಗುರುಗಳು. ಇನ್ನೂ, ಪ್ರಾದೇಶಿಕ ಪಕ್ಷಕ್ಕೆ ಅಷ್ಟೋ ಇಷ್ಟೋ ಶಕ್ತಿ ಇದೆ. ಬಿಜೆಪಿ ಸೇರಿ ಅದನ್ನು ಕೂಡ ಕಳ್ಕೊಂಡಿದ್ದಾರೆ. ಬಿಜೆಪಿ ಜೊತೆ ಸೇರಿದ್ರೆ ಏನು ಆಗುತ್ತೆ ಅಂತಾ ಮುಂದೆ ನೋಡೋಣ ಎಂದಿದ್ದಾರೆ.



