ಬೆಂಗಳೂರು:- ರಾಜಧಾನಿ ಬೆಂಗಳೂರಿನ ಯಡಿಯೂರಿನಲ್ಲಿ ಮದುವೆಯಾದ ಎರಡೇ ವರ್ಷದಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೀರ್ತಿ ಶ್ರೀ (24) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗಂಡನ ಹಾಗೂ ಅವರ ಕುಟುಂಬಸ್ಥರ ವರದಕ್ಷಿಣೆ ಕಿರುಕುಳದಿಂದ ಕೀರ್ತಿ ಸಾವಿಗೆ ಶರಣಾಗಿದ್ದಾಳೆ ಎಂದು ಕೀರ್ತಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತಕೀರ್ತಿ ಶ್ರೀ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನವಳು. 2023 ರ ನವೆಂಬರ್‌ನಲ್ಲಿ ಗುರುಪ್ರಸಾದ್ ಅವರೊಂದಿಗೆ ಮದುವೆಯಾಗಿದ್ದರು. ಕುಟುಂಬದವರ ಆರೋಪದ ಪ್ರಕಾರ, ಮದುವೆಗೆ ಸುಮಾರು 35 ಲಕ್ಷ ರೂ. ವೆಚ್ಚದ 400 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ. ನಗದು ನೀಡಲಾಗಿತ್ತು. ಆದರೂ, ಕೀರ್ತಿ ಶ್ರೀ ಮೇಲೆ ಗಂಡನ ಮತ್ತು ಅವರ ಮನೆಯವರು ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಕೀರ್ತಿ ಶ್ರೀ ತಂದೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿ ತನಿಖೆ ನಡೆಸಲು ವಿನಂತಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



