ಡಾಗ್ ಬ್ರೀಡರ್ ಸತೀಶ್ ಕ್ಯಾಡಬಾಮ್ ಎಲ್ಲೆಂದರಲ್ಲಿ ಮಾತನಾಡುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಟಿವಿ ಡಿಬೇಟ್ಗಳಿಂದ ಹಿಡಿದು ಯೂಟ್ಯೂಬ್ ಸಂದರ್ಶನಗಳವರೆಗೆ, ಪ್ರತಿಯೊಂದು ವೇದಿಕೆಯಲ್ಲೂ ತಮ್ಮ ಹೇಳಿಕೆಗಳಿಂದಲೇ ಸುದ್ದಿ ಆಗುತ್ತಿದ್ದಾರೆ. ಇದೀಗ ‘ಗಿಲ್ಲಿ ಗೆಲ್ಲಲ್ಲ’ ಹೇಳಿಕೆ ಕುರಿತು ಹೊಸ ಸ್ಪಷ್ಟನೆ ನೀಡಿದ್ದಾರೆ.
ಗಿಲ್ಲಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದ ಸತೀಶ್, ‘ನನಗೆ ಬಿಗ್ ಬಾಸ್ ಮನೆಯಲ್ಲಿ ಹಿಂಸೆ ಕೊಟ್ಟ’, ‘ಗಿಲ್ಲಿ ಹೊರಗೆ ಹೋಗಲು ನಾನೇ ಕಾರಣ’ ಎಂದು ಹಲವು ಬಾರಿ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು. ಈ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.
ಈಗ ಮಾಧ್ಯಮಗಳ ಎದುರು ಮಾತನಾಡಿದ ಸತೀಶ್, “ನಾನು ಹೇಳಿದ ಮಾತು ನಿಜವಾಗಿಲ್ಲ. ನಾನು ಜ್ಯೋತಿಷಿ ಅಲ್ಲ. ಕುಡಿದ ನಶೆಯಲ್ಲಿ ಹೇಳಿದ್ದ ಮಾತು ಅದು” ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ.
ಈ ವಿಚಾರದಿಂದ ಬೇಸರಗೊಂಡಿರುವ ಸತೀಶ್, ಗಿಲ್ಲಿ ಅಭಿಮಾನಿಗಳು ತಮಗೆ ಹಾಗೂ ತಮ್ಮ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿ ಕೆಲವರನ್ನು ಬಂಧಿಸುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಸಾರ್ವಜನಿಕ ವಲಯದಲ್ಲಿ ಸತೀಶ್ ಹೇಳಿಕೆಗಳ ಮೇಲೆ ನಂಬಿಕೆ ಕಡಿಮೆಯಾಗಿದೆ. ಅವರ ಬಹುತೇಕ ಮಾತುಗಳು ಟ್ರೋಲ್ ಆಗುತ್ತಿದ್ದು, ಈಗ ಅವರ ಪ್ರತಿಯೊಂದು ಹೇಳಿಕೆಯನ್ನೂ ಜನರು ಸಂಶಯದಿಂದಲೇ ನೋಡುತ್ತಿದ್ದಾರೆ.



