ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಜನ್ಮದಿನದ ಪ್ರಯುಕ್ತ ಬುಧವಾರ ಪಟ್ಟಣದ ಶ್ರೀ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೇಶ್ವರ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಮಾತನಾಡಿ, ಕನ್ನಡ ನಾಡಿನ ನೆಲ, ಜಲ, ಭಾಷೆ ರಕ್ಷಣೆ ಜೊತೆಗೆ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರೇಷ್ಠವಾದ ಕೊಡುಗೆಗಳನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ನಮ್ಮ ರಾಜ್ಯ, ರಾಷ್ಟ್ರದ ಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ನೀಡಲಿ ಎಂದರು.
ಗಿರಿಜಾ ಬಸವ ಆಸ್ಪತ್ರೆ ಹಾಗೂ ಜಿಮ್ಸ್‌ನ ಡಾ. ಪ್ರಕಾಶ ಹೊಸಮನಿ ನೇತೃತ್ವದ ವೈದ್ಯರ ತಂಡದಿಂದ ಹಲವಾರು ಜನರ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿ ಪಡೆದರು. ಪಕ್ಷದ ಮುಖಂಡರಾದ ಚಂಬಣ್ಣ ಬಾಳಿಕಾಯಿ, ದೇವಣ್ಣ ಬಳಿಗಾರ, ಸೋಮಣ್ಣ ಡಾಣಗಲ್, ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ, ಹೊನ್ನಪ್ಪ ವಡ್ಡರ, ಅಶೋಕ ನಿರಾಲೋಟಿ, ಬಸವರಾಜ ಉಮಚಗಿ, ಸುಭಾನಸಾಬ ಹೊಂಬಳ, ಬಸವರಾಜ ಜಾಲಗಾರ, ಮುತ್ತು ನೀರಲಗಿ, ರಾಜು ಲಿಂಬಿಕಾಯಿ, ಮಾಂತೇಶ ಉಮಚಗಿ, ಮಲ್ಲಿಕಾರ್ಜುನ ನಿರಾಲೋಟಿ, ಚಂದ್ರು ಮಾಗಡಿ ಮುಂತಾದವರಿದ್ದರು.



