ನವದೆಹಲಿ: ಯೋಗಗುರು ಬಾಬಾ ರಾಮದೇವ್ ಅವರ ಸಂಸ್ಥೆಯಾದ ಪತಂಜಲಿ ಆಯುರ್ವೇದ ತನ್ನ ಗ್ರಾಹಕರ ಅನುಕೂಲಕ್ಕಾಗಿ ಅಧಿಕೃತ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸಿದೆ.
ಈಗ ಗ್ರಾಹಕರು ಅಂಗಡಿಗೆ ಹೋಗದೇ, ತಮ್ಮ ಮನೆಯಿಂದಲೇ ಪತಂಜಲಿಯ ಎಲ್ಲಾ ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಬಹುದು. ಪತಂಜಲಿಯ ಅಧಿಕೃತ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ಸೋಪ್, ಶಾಂಪೂ, ಟೂತ್‌ಪೇಸ್ಟ್, ಹಿಟ್ಟು, ತುಪ್ಪ, ಬಿಸ್ಕತ್ತು, ಹರ್ಬಲ್ ಜ್ಯೂಸ್ ಹಾಗೂ ಆಯುರ್ವೇದ ಔಷಧಿಗಳು ಸೇರಿದಂತೆ ನೂರಾರು ಉತ್ಪನ್ನಗಳು ಲಭ್ಯವಿವೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಹಕರಿಗೂ ಈ ಸೇವೆ ವಿಶೇಷವಾಗಿ ಉಪಯುಕ್ತವಾಗಿದೆ.
ಆನ್‌ಲೈನ್ ಮೂಲಕ ಆರ್ಡರ್ ಮಾಡುವ ಗ್ರಾಹಕರಿಗೆ 3% ರಿಂದ 10% ವರೆಗೆ ರಿಯಾಯಿತಿ ಸಿಗುತ್ತದೆ. ಜೊತೆಗೆ PNB–Patanjali ಹಾಗೂ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ಕ್ಯಾಶ್‌ಬ್ಯಾಕ್ ಸೌಲಭ್ಯವೂ ಲಭ್ಯವಿದೆ. ಆಯ್ದ ಉತ್ಪನ್ನಗಳಿಗೆ ಉಚಿತ ಮನೆಬಾಗಿಲು ವಿತರಣೆ ಸಹ ನೀಡಲಾಗುತ್ತಿದೆ.
ಪತಂಜಲಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ವಿಧಾನ:
. patanjaliayurved.net ವೆಬ್‌ಸೈಟ್‌ಗೆ ಭೇಟಿ ನೀಡಿ
. ಹೊಸ ಅಕೌಂಟ್ ತೆರೆಯಿರಿ ಅಥವಾ ಲಾಗಿನ್ ಆಗಿ
. ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿ ಕಾರ್ಟ್‌ಗೆ ಸೇರಿಸಿ
. ಆನ್‌ಲೈನ್ ಪಾವತಿ ಮಾಡಿ ಆರ್ಡರ್ ದೃಢೀಕರಿಸಿ
. ಕೆಲವು ದಿನಗಳಲ್ಲಿ ಉತ್ಪನ್ನಗಳು ಮನೆಗೆ ತಲುಪುತ್ತವೆ
. ಪತಂಜಲಿಯ ಈ ಆನ್‌ಲೈನ್ ಸೇವೆ, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಂತೆ ಗ್ರಾಹಕರಿಗೆ ಸುಲಭ, ಸುರಕ್ಷಿತ ಹಾಗೂ ಲಾಭದಾಯಕ ಶಾಪಿಂಗ್ ಅನುಭವವನ್ನು ನೀಡುತ್ತಿದೆ.



