Home Karnataka News ರಾಮನಗರ| ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿ ಹೊತ್ತೊಯ್ದ ಚಿರತೆ; ಗ್ರಾಮಸ್ಥರಲ್ಲಿ ಆತಂಕ!

ರಾಮನಗರ| ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿ ಹೊತ್ತೊಯ್ದ ಚಿರತೆ; ಗ್ರಾಮಸ್ಥರಲ್ಲಿ ಆತಂಕ!

0
ರಾಮನಗರ| ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿ ಹೊತ್ತೊಯ್ದ ಚಿರತೆ; ಗ್ರಾಮಸ್ಥರಲ್ಲಿ ಆತಂಕ!
Spread the love

ರಾಮನಗರ:- ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ಜರುಗಿದೆ.

ಚಿರತೆ ಹಾವಳಿಯಿಂದ ಗ್ರಾಮಸ್ಥರು ಹೈರಾಣಾಗಿದ್ದು, ರಾತ್ರಿ ವೇಳೆ ಮನೆಯಿಂದ ಆಚೆಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಜಮೀನುಗಳಿಗೆ ತೆರಳಲು ಆತಂಕ ವ್ಯಕ್ತಪಡಿಸಿದ್ದಾರೆ. ಚಿರತೆ ಕಾಟ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಡರಾತ್ರಿ ಗ್ರಾಮದ ಹೊರವಲಯದ ಕೋಳಿಫಾರಂ ಬಳಿ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಒಂದು ನಾಯಿಯನ್ನ ಚಿರತೆ ಹೊತ್ತೊಯ್ದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.


Spread the love

LEAVE A REPLY

Please enter your comment!
Please enter your name here