ಬೆಂಗಳೂರು: ಅಂತರಾಷ್ಟ್ರೀಯ ಮಾರ್ಗದ ಮೂಲಕ ನಡೆಯುತ್ತಿದ್ದ ಮಾದಕ ವಸ್ತುಗಳ ಕಳ್ಳಸಾಗಣೆ ಯತ್ನವನ್ನು ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕನ ಬಳಿ ₹3.39 ಕೋಟಿ ಮೌಲ್ಯದ 9.7 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.
ಲಗೇಜ್ ಸ್ಕ್ಯಾನಿಂಗ್ ವೇಳೆ ಅನುಮಾನ ಮೂಡಿದ ಹಿನ್ನೆಲೆ ಅಧಿಕಾರಿಗಳು ಸೂಕ್ಷ್ಮ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳಸಾಗಣೆ ಜಾಲದ ಸಂಪರ್ಕಗಳ ಬಗ್ಗೆ ವಿಚಾರಣೆ ಮುಂದುವರಿದಿದೆ.
ಫೆಬ್ರವರಿ 7ರಂದು ಸಹ ಕಸ್ಟಮ್ಸ್ ಇಲಾಖೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹3 ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿತ್ತು. ಕಳೆದ ಕೆಲ ದಿನಗಳಲ್ಲಿ ನಡೆದ ಈ ಕ್ರಮಗಳು ಅಂತರಾಷ್ಟ್ರೀಯ ಡ್ರಗ್ ಸ್ಮಗ್ಲಿಂಗ್ ಜಾಲಗಳು ಬೆಂಗಳೂರು ಮಾರ್ಗವನ್ನು ಬಳಸುತ್ತಿರುವುದನ್ನು ತೋರಿಸುತ್ತಿವೆ.
ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆ ಇನ್ನಷ್ಟು ಕಠಿಣಗೊಳಿಸಿದ್ದಾರೆ.



