HomeGadag Newsತಯಬಅಲಿ ಹೊಂಬಳರಿಗೆ ‘ಫೆಲೋಶಿಪ್’ ಪದವಿ

ತಯಬಅಲಿ ಹೊಂಬಳರಿಗೆ ‘ಫೆಲೋಶಿಪ್’ ಪದವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ವಿದ್ಯಾಶಾಲೆಗಳ ಸಂಘ ಬೆಂಗಳೂರು ವತಿಯಿಂದ ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ಶಿಕ್ಷಣದಲ್ಲಿ ಸತತ 50 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ನಗರ ಶ್ರೀ ಕಲ್ಮೇಶ್ವರ ಬೆರಳಚ್ಚು ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ಮಾಲೀಕರು ಮತ್ತು ಪ್ರಾಚಾರ್ಯರಾದ ಡಾ. ತಯಬಅಲಿ ಅ.ಹೊಂಬಳರಿಗೆ ಸಮಗ್ರ ಬೆರಳಚ್ಚು ಶಿಕ್ಷಣ ಸೇವೆಯನ್ನು ಮೆಚ್ಚಿ 2024-25ನೇ ಸಾಲಿನ ಸಂಘದ 56ನೇ ಸರ್ವಸದಸ್ಯರ ಸಭೆಯಲ್ಲಿ ಗೌರವಾರ್ಥ `ಫೆಲೋಷಿಪ್’ ಪದವಿ ಪ್ರದಾನ ಮಾಡಲಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ಬೆರಳಚ್ಚು, ಶೀಘ್ರಲಿಪಿ ಮತ್ತು ಗಣಕಯಂತ್ರ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇಂದು ಸಾವಿರಾರು ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತು ಉನ್ನತ ಹುದ್ದೆ ಮತ್ತು ಪ್ರತಿಷ್ಠಿತ ಇಲಾಖೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವುದು ಸಂಸ್ಥೆಯ ಹಿರಿಮೆಯಾಗಿದೆ. ವಿದ್ಯಾರ್ಥಿಗಳನ್ನು ಶಿಕ್ಷಣ ಮತ್ತು ಸನ್ಮಾರ್ಗದ ದಾರಿಯಲ್ಲಿ ನಡೆಯಲು ಪ್ರೇರಣೆಯಾಗಿ, ಬೆರಳಚ್ಚು ಸೇವೆಯಲ್ಲಿಯೇ ತಮ್ಮ ಜೀವನ ಸವೆಸಿದ ಸಂಸ್ಥೆಯ ಸೇವೆಯನ್ನು ಮೆಚ್ಚಿ 2024-25ನೇ ಸಾಲಿನ ಸಂಘದ 56ನೇ ಸರ್ವಸದಸ್ಯರ ಸಭೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಜಸ್ಟೀಸ್ ಜಿ. ಬಸವರಾಜ ಇವರು ಫೆ. 22ರಂದು ಬೆಂಗಳೂರಿನಲ್ಲಿ ಪದವಿ ಪ್ರದಾನ ಮಾಡಲಿದ್ದಾರೆ.

ಬೆರಳಚ್ಚು ಶಿಕ್ಷಣ ತಜ್ಞರು, ಹಿರಿಯರು, ಸಾಹಿತಿಗಳು, ಮಿತ್ರವೃಂದದವರು ಮತ್ತು ವಿದ್ಯಾರ್ಥಿಗಳು ಡಾ. ತಯಬಅಲಿ ಅ.ಹೊಂಬಳರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!