ಟಾಕ್ಸಿಕ್ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಶ್ ರಾ ಲುಕ್ ಮತ್ತು ಆ್ಯಕ್ಷನ್ ಅವತಾರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ.
ಟೀಸರ್‌ನಲ್ಲಿ ದ್ವಿಪಾತ್ರದ ಸುಳಿವು ಸಿಕ್ಕಿದ್ದು, ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ರಾಯನ ಮಗನಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹರಿದಾಡುತ್ತಿದೆ. ಟೀಸರ್‌ನಲ್ಲಿ ಸಾಕಷ್ಟು ರಕ್ತಪಾತದ ದೃಶ್ಯಗಳು ಇದ್ದು, ಯಶ್ ಸಂಪೂರ್ಣ ವೈಲೆಂಟ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
“ಈ ಸಲ ಯುದ್ಧನೇ ಬೇರೆ” ಎಂಬ ಡೈಲಾಗ್ ಚಿತ್ರದ ಟೋನ್ ಅನ್ನು ಸ್ಪಷ್ಟಪಡಿಸಿದೆ. “ಹಠ ಬಿಡೋ ಮಾತೇ ಇಲ್ಲ” ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಧುರಂದರ್ 2 ವಿರುದ್ಧದ ಸಂದೇಶ ಎಂದು ಹೇಳಲಾಗುತ್ತಿದೆ.
ಹಿಂದಿನ ಟೀಸರ್‌ನಲ್ಲಿ ಲೈಂಗಿಕ ದೃಶ್ಯ ತೋರಿಸಿದ ಹಿನ್ನೆಲೆ ವಿವಾದ ಉಂಟಾಗಿತ್ತು. ದೂರು ದಾಖಲಾಗಿದ್ದರೂ ಚಿತ್ರದ ಹೈಪ್ ಕಡಿಮೆಯಾಗಲಿಲ್ಲ. ಮೊದಲ ಟೀಸರ್ 100 ಮಿಲಿಯನ್ ವೀಕ್ಷಣೆ ಗಳಿಸಿತ್ತು. ಈಗಿನ ಟೀಸರ್ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ.
ಚಿತ್ರಕ್ಕೆ ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿದೆ. ಯಶ್ ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ ಹಾಗೂ ಹುಮಾ ಖುರೇಶಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ.



