ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಗದಗ ಐಎಂಎ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದಲ್ಲಿ ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಜರುಗಿತು.
ಗದಗ ತೋಂಟದಾರ್ಯ ಮಠದಿಂದ ಆರಂಭಗೊಂಡ ಜಾಥಾ ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ, ಹತ್ತಿಕಾಳ ಕೂಟ, ಹಳೇ ಬಸ್ ನಿಲ್ದಾಣ, ಕೃಷ್ಣಾ ಟಾಕೀಸ್ ಮಾರ್ಗವಾಗಿ ಮರಳಿ ತೋಂಟದಾರ್ಯ ಮಠವನ್ನು ತಲುಪಿತು.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಗದಗ ಜಿಲ್ಲೆಯಲ್ಲಿ ಯಾರೇ ಮೃತಪಟ್ಟರೂ ಕುಟುಂಬಸ್ಥರು ತಕ್ಷಣ 9448611272, 9480193193, 9886328687, 9945865368 ಈ ನಂಬರ್‌ಗೆ ಫೋನ್ ಮಾಡಿದರೆ ನೇತ್ರದಾನ ಪ್ರಕ್ರಿಯೆ ಕೈಗೊಳ್ಳಲಾಗುವುದು. ಕಾರಣ ವ್ಯಕ್ತಿಯ ಮರಣದ ನಂತರ ಕಣ್ಣು ಮಣ್ಣಿನಲ್ಲಿ ಮಣ್ಣಾಗದೆ, ಕಣ್ಣಿಲ್ಲದವರಿಗೆ ಅವರ ಕಣ್ಣು ಕಾಣುವಂತೆ ಮಾಡಲು ಕಣ್ಣುದಾನ ಮಾಡಲು ಕುಟುಂಬಸ್ಥರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ರ್ಯಾಲಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಜು ವೇರ್ಣೆಕರ, ರಾಜಣ್ಣ ಮಲ್ಲಾಡದ, ರೇಣುಕಪ್ರಸಾದ ಹಿರೇಮಠ, ಆನಂದ ಪೋತ್ನೀಸ್, ರಮೇಶ್ ಶಿಗ್ಲಿ, ನಿತೀಶ್ ಸಾಲಿ, ಡಾ. ಶ್ರೀಧರ ಕುರಡಗಿ, ಮಂಜುನಾಥ ವೀರಲಿಂಗಯ್ಯನಮಠ, ಎಸ್.ಕೆ. ಶೆಟ್ಟರ, ಅಮೀತ್‌ಚಂದ್, ಪ್ರವೀಣ ವಾರಕರ, ಪ್ರಸಾದ ಶಿಗ್ಲಿಮಠ, ಪ್ರಕಾಶ ರಾಯ್ಕರ್, ಡಾ. ಲಾವಣ್ಯ, ಡಾ. ಸುನೀತಾ ಕುರಡಗಿ, ಸುರೇಖಾ ಮಲ್ಲಾಡದ, ಸಹನಾ ಹಿರೇಮಠ ಮುಂತಾದವರಿದ್ದರು.



